ಜೇಸನ್‌ ರಾಯ್‌ ಶತಕ: ಬಾಂಗ್ಲಾ ಗೆಲುವಿಗೆ 387 ರನ್‌ ಗುರಿ ನೀಡಿದ ಇಂಗ್ಲೆಂಡ್‌

ಬುಧವಾರ, ಜೂನ್ 19, 2019
23 °C
ವಿಶ್ವಕಪ್‌ ಕ್ರಿಕೆಟ್‌

ಜೇಸನ್‌ ರಾಯ್‌ ಶತಕ: ಬಾಂಗ್ಲಾ ಗೆಲುವಿಗೆ 387 ರನ್‌ ಗುರಿ ನೀಡಿದ ಇಂಗ್ಲೆಂಡ್‌

Published:
Updated:

ಕಾರ್ಡಿಫ್‌: ಬಾಂಗ್ಲಾ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 386 ರನ್‌ ಗಳಿಸಿದೆ. 

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಪ್ರಾರಂಭದಲ್ಲಿಯೇ ಸ್ಪಿನ್ನರ್‌ಗಳನ್ನು ಮುಂದಿಟ್ಟು ವಿಕೆಟ್‌ ಗಳಿಸುವ ಯೋಜನೆ ರೂಪಿಸಿತು. ಆದರೆ, ದೃಢವಾಗಿ ನಿಂತ ಆರಂಭಿಕ ಬ್ಯಾಟ್ಸ್‌ಮನ್‌ಗಳ ಎದುರು ಬಾಂಗ್ಲಾ ತಂತ್ರಗಾರಿಕೆ ಫಲ ನೀಡಲಿಲ್ಲ. 

ಆರಂಭಿಕ ಆಟಗಾರ ಜೇಸನ್‌ ರಾಯ್ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಶತಕ ಸಾಧನೆ ಮಾಡಿದರು. 92 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 12 ಬೌಂಡರಿ ಒಳಗೊಂಡಂತೆ 100 ರನ್‌ ಸಿಡಿಸಿದರು. ಜೇಸನ್‌ ರಾಯ್‌ ಮತ್ತು ಜಾನಿ ಬೇಸ್ಟೊ ಮೊದಲ ವಿಕೆಟ್‌ ಜತೆಯಾಟದಲ್ಲಿ ತಂಡವನ್ನು ಉತ್ತಮ ಸ್ಕೋರ್‌ನತ್ತ ಮುನ್ನಡೆಸಿದರು.

ಶತಕದ ನಂತರವೂ ಬಿರುಸಿನ ಆಟ ಆಡಿದ ರಾಯ್‌, 121 ಎಸೆತಗಳಲ್ಲಿ 153 ರನ್‌ ಗಳಿಸಿ ಆಟ ಮುಗಿಸಿದರು.  ಮೆಹಿದಿ ಹಸನ್‌ ಓವರ್‌ನಲ್ಲಿ ಹೊರನಡೆದ ಅವರು ಒಟ್ಟು 5 ಸಿಕ್ಸರ್‌ ಹಾಗೂ 14 ಬೌಂಡರಿ ದಾಖಲಿಸಿದರು. 

ಕ್ಷಣಕ್ಷಣದ ಸ್ಕೋರ್‌: https://bit.ly/31skgzo

35 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 236 ರನ್‌ ಗಳಿಸಿದ್ದ ಇಂಗ್ಲೆಂಡ್‌ ಬೃಹತ್‌ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ತಂಡದ ನಾಯಕ ಇಯಾನ್‌ ಮಾರ್ಗನ್‌(35) ಮತ್ತು ಜೋಸ್‌ ಬಟ್ಲರ್‌(64) ಆಟದಿಂದಾಗಿ ತಂಡ 386 ರನ್‌ ಗಳಿಸಿತು.

ಅರ್ಧ ಶತಕ ಗಳಿಸಿದ ಜಾನಿ ಬೇಸ್ಟೊ(51) ಆಟವನ್ನು ಮಷ್ರಫೆ ಮೊರ್ತಾಜಾ ಎಸೆತ ಕೊನೆಯಾಗಿಸಿತು. 50 ಎಸೆತಗಳಲ್ಲಿ 51 ರನ್‌ ಗಳಿಸಿದ್ದ ಬೇಸ್ಟೊ, ಮೊರ್ತಾಜಾ ಬೌಲಿಂಗ್‌ನಲ್ಲಿ ಹೊಡೆದ ಚೆಂಡನ್ನು ಮೆಹಿದಿ ಹಸನ್‌ ಕ್ಯಾಚ್‌ ಹಿಡಿದರು. ಇದರೊಂದಿಗೆ ರಾಯ್‌ ಮತ್ತು ಬೇಸ್ಟೊ ಜತೆಯಾಟ ಕೊನೆಯಾದರೂ ಜೇಸನ್‌ ರಾಯ್‌ ಶತಕದ ಆಟ ಆಡಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೋ ರೂಟ್‌(21) ಮೊಹಮದ್‌ ಸೈಫುದ್ದೀನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. 

ಎರಡೂ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಒಂದು ಸೋಲು ಕಂಡಿವೆ. ಟ್ರೆಂಟ್‌ಬ್ರಿಜ್‌ನಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿದ್ದರಿಂದ ಇಂಗ್ಲೆಂಡ್‌ ತಂಡಕ್ಕೆ ವಿಶ್ವಕಪ್‌ ಆರಂಭದಲ್ಲೇ ಎಚ್ಚರಿಕೆ ರವಾನೆಯಾಗಿದೆ. ಇಂಗ್ಲೆಂಡ್‌ 2015ರ ವಿಶ್ವಕಪ್‌ನಿಂದ ಹೊರಬೀಳಲು ಆಗ ಬಾಂಗ್ಲಾದೇಶ ತಂಡದ ಎದುರು ಅನುಭವಿಸಿದ ಸೋಲು ಕಾರಣವಾಗಿತ್ತು. ಇಯಾನ್‌ ಮಾರ್ಗನ್‌ ಬಳಗದ ಬ್ಯಾಟಿಂಗ್‌ ಬಲಿಷ್ಠವಾಗಿದ್ದು ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ 300ರ ಗಡಿ ದಾಟಿದೆ. 

ತಂಡಗಳು: 

ಇಂಗ್ಲೆಂಡ್‌: ಇಯಾನ್‌ ಮಾರ್ಗನ್‌ (ಕ್ಯಾಪ್ಟನ್‌), ಮೊಯಿನ್‌ ಆಲಿ, ಜೊಫ್ರಾ ಅರ್ಚರ್‌, ಜಾನಿ ಬೇಸ್ಟೊ, ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಟಾಮ್‌ ಕರನ್‌, ಲಿಯಾಮ್‌ ಡಾಸನ್, ಲಿಯಾಮ್‌ ಪ್ಲಂಕೆಟ್‌, ಅದಿಲ್‌ ರಶೀದ್‌, ಜೋ ರೂಟ್‌, ಜೇಸನ್‌ ರಾಯ್, ಬೆನ್‌ ಸ್ಟೋಕ್ಸ್‌, ಜೇಮ್ಸ್‌ ವಿನ್ಸ್‌, ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌.

ಬಾಂಗ್ಲಾದೇಶ: ಮಷ್ರಫೆ ಮೊರ್ತಾಜಾ (ಕ್ಯಾಪ್ಟನ್‌), ಅಬು ಜಾಯೆದ್‌, ಲಿಟ್ಟನ್‌ ದಾಸ್‌ (ವಿಕೆಟ್‌ ಕೀಪರ್‌), ಮಹಮದುಲ್ಲಾ, ಮೆಹಿದಿ ಹಸನ್‌, ಮೊಹಮದ್‌ ಮಿಥುನ್‌, ಮೊಹಮದ್‌ ಸೈಫುದ್ದೀನ್‌, ಮೊಸಾದೆಕ್‌ ಹುಸೇನ್‌, ಮುಷ್ಫಿಕರ್ ರಹೀಮ್‌ (ವಿಕೆಟ್ ಕೀಪರ್‌), ಮುಸ್ತಫಿಜುರ್‌ ರೆಹಮಾನ್‌, ರುಬೆಲ್‌ ಹೊಸೇನ್‌, ಶಬ್ಬೀರ್‌ ರೆಹಮಾನ್‌, ಶಕೀಬ್‌ ಅಲ್‌ ಹಸನ್, ಸೌಮ್ಯ ಸರ್ಕಾರ್‌, ತಮೀಮ್‌ ಇಕ್ಬಾಲ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !