ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕೀಬ್‌ ಅಲ್‌ ಹಸನ್ ಆರ್ಭಟಕ್ಕೆ ಒಲಿಯದ ಗೆಲುವು; ಇಂಗ್ಲೆಂಡ್‌ಗೆ ಜಯದ ಪುಳಕ

ವಿಶ್ವಕಪ್‌ ಕ್ರಿಕೆಟ್‌
Last Updated 8 ಜೂನ್ 2019, 19:56 IST
ಅಕ್ಷರ ಗಾತ್ರ

ಕಾರ್ಡಿಫ್‌:ಮೂರನೇ ಕ್ರಮಾಂಕದ ಶಕೀಬ್ ಅಲ್ ಹಸನ್ ಗಳಿಸಿದ ಮೋಹಕ ಶತಕ (121; 119 ಎಸೆತ, 1 ಸಿಕ್ಸರ್‌, 12 ಬೌಂಡರಿ) ವ್ಯರ್ಥವಾಯಿತು. ಆತಿಥೇಯ ಇಂಗ್ಲೆಂಡ್ ಪೇರಿಸಿದ ಬೃಹತ್ ಮೊತ್ತವನ್ನು ದಾಟಲಾಗದ ಬಾಂಗ್ಲಾದೇಶ 106 ರನ್‌ಗಳಿಂದ ಸೋತಿತು.

ಸೋಫಿಯಾ ಗಾರ್ಡನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 386 ರನ್ ಗಳಿಸಿತ್ತು. ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 280 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. 63 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಶಕೀಬ್ ಮತ್ತು ಮುಷ್ಫಿಕುರ್ ರಹೀಮ್ 106 ರನ್‌ಗಳನ್ನು ಸೇರಿಸಿದರು. ಆದರೆ ಜೊಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಬೆನ್ ಸ್ಟೋಕ್ಸ್ ದಾಳಿಗೆ ನಲುಗಿದ ತಂಡ ಸೋಲಿಗೆ ಶರಣಾಯಿತು.

ಜೇಸನ್ ರಾಯ್ ಶತಕ: ಜೇಸನ್ ರಾಯ್ ಇಲ್ಲಿ ಶತಕದ ಚಿತ್ತಾರ ಬಿಡಿಸಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/31skgzo

ಟಾಸ್ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂಗ್ಲೆಂಡ್ ತಂಡದ ಆರಂಭಿಕ ಜೋಡಿ ಜೇಸನ್ ರಾಯ್ (153; 121ಎಸೆತ, 14ಬೌಂಡರಿ, 5 ಸಿಕ್ಸರ್) ಮತ್ತು ಜಾನಿ ಬೆಸ್ಟೊ (51; 50ಎಸೆತ, 6ಬೌಂಡರಿ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 128 ರನ್‌ ಸೇರಿಸಿದರು. ಬಾಂಗ್ಲಾದ ನಾಯಕ ಮಷ್ರಫೆ ಮೊರ್ತಜಾ ಸೇರಿ ದಂತೆ ಆರು ಬೌಲರ್‌ಗಳ ಪ್ರಯತ್ನ ಕೈಗೂಡಲಿಲ್ಲ.

20ನೇ ಓವರ್‌ನಲ್ಲಿ ಮೊರ್ತಜಾ ಮೊದಲ ವಿಕೆಟ್ ಗಳಿಸಿದರು. ಜಾನಿ ಬೆಸ್ಟೊ ಹೊಡೆದ ಚೆಂಡನ್ನು ಮೆಹದಿ ಹಸನ್ ಹಿಡಿತಕ್ಕೆ ಪಡೆದರು. ಜೊತೆಯಾಟ ಮುರಿಯಿತು. ಆದರೆ ಜೇಸನ್ ಆರ್ಭಟ ಮುಂದುವರಿಯಿತು.

ಅವರು ಜೋ ರೂಟ್ ಅವ ರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 77 ರನ್‌ ಸೇರಿಸಿದರು. ಅದರಲ್ಲಿ ರೂಟ್ ಗಳಿಸಿದ್ದು 21 ರನ್‌ ಮಾತ್ರ.

ಜೇಸನ್‌ಗೆ ಡಿಕ್ಕಿ: ನೆಲಕ್ಕೆ ಬಿದ್ದ ಅಂಪೈರ್ ಜೋಯಲ್ ವಿಲ್ಸನ್‌

ಜೇಸನ್ ರಾಯ್ ಅವರು ತಾವೆದುರಿಸಿದ 92ನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿ ಶತಕ ಪೂರೈಸಲು ಬೇಕಾಗಿದ್ದ ಒಂದು ರನ್‌ಗಾಗಿ ಇನ್ನೊಂದು ಬದಿಗೆ ಜೋರಾಗಿ ಓಡಿದರು. ಆದರೆ ಅಲ್ಲಿ ಅಂಪೈರ್ ಜೋಯಲ್ ವಿಲ್ಸನ್‌ ಅವರಿಗ ಡಿಕ್ಕಿ ಹೊಡೆದರು. ವಿಲ್ಸನ್ ಬಿದ್ದರು. ಈ ಹಂತದಲ್ಲಿ ಶತಕ ಪೂರೈಸಿದ್ದನ್ನೂ ಮರೆತ ಜೇಸನ್ ಅವರು ವಿಲ್ಸನ್ ಅವರನ್ನು ಕೈಹಿಡಿದು ಎಬ್ಬಿಸಿದರು. ಅವರಿಗೆ ಗಾಯವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಕ್ಷಮೆ ಕೇಳಿದರು. ವಿಲ್ಸನ್ ನಗುತ್ತ ಜೇಸನ್ ಕೈಕುಲುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT