ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC ODI World Cup: ಏಕದಿನ ವಿಶ್ವಕಪ್‌ ವಿಜೇತರಿಗೆ ₹33 ಕೋಟಿ

Published 22 ಸೆಪ್ಟೆಂಬರ್ 2023, 13:32 IST
Last Updated 22 ಸೆಪ್ಟೆಂಬರ್ 2023, 13:32 IST
ಅಕ್ಷರ ಗಾತ್ರ

ದುಬೈ: ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ತಂಡ ₹ 33 ಕೋಟಿ ನಗದು ಬಹುಮಾನ ತನ್ನದಾಗಿಸಿಕೊಳ್ಳಲಿದೆ. ‘ರನ್ನರ್‌ ಅಪ್‌’ ತಂಡಕ್ಕೆ ₹ 16 ಕೋಟಿ ಲಭಿಸಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತಿಳಿಸಿದೆ.

ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಟೂರ್ನಿಯ ಬಹುಮಾನ ಮೊತ್ತ ಹಾಗೂ ಪ್ರೋತ್ಸಾಹಧನದ ವಿವರಗಳನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸುವ ಎರಡು ತಂಡಗಳಿಗೆ ತಲಾ ₹ 6 ಕೋಟಿ ಲಭಿಸಲಿವೆ.

ನಾಕೌಟ್‌ ಹಂತ ಪ್ರವೇಶಿಸಲು ವಿಫಲವಾಗುವ ಇತರ ಆರು ತಂಡಗಳು ತಲಾ ₹ 82 ಲಕ್ಷ ಹಾಗೂ ಲೀಗ್‌ ಹಂತದಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ತಲಾ ₹ 33 ಲಕ್ಷ ಪ್ರೋತ್ಸಾಹಧನ ಗಳಿಸಲಿವೆ.

ಐಸಿಸಿಯು ಈ ಬಾರಿಯ ಟೂರ್ನಿಯಲ್ಲಿ ಒಟ್ಟು ₹ 83 ಕೋಟಿ ಮೊತ್ತವನ್ನು ಬಹುಮಾನ ಮತ್ತು ಪ್ರೋತ್ಸಾಹಧನ ರೂಪದಲ್ಲಿ ತಂಡಗಳಿಗೆ ಹಂಚಿಕೆ ಮಾಡಲಿದೆ.

ವಿಶ್ವಕಪ್‌ ಟೂರ್ನಿ ಅ.5 ರಿಂದ 19ರ ವರೆಗೆ ನಡೆಯಲಿದೆ. 13ನೇ ಆವೃತ್ತಿಯ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ಆತಿಥೇಯ ಭಾರತ, ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್‌, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT