ಮುಂಬೈ: ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ ಹುಟ್ಟುಹಾಕಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಟೂರ್ನಿಯ ಚೊಚ್ಚಲ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಭಾನುವಾರ ತೆರೆಬೀಳಲಿದೆ.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎದುರಾಗಲಿದ್ದು, ಜಿದ್ದಾಜಿದ್ದಿನ ಸೆಣಸಾಟ ನಿರೀಕ್ಷಿಸಲಾಗಿದೆ.

ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್ ಪ್ರವೇಶಿಸಿದ್ದರೆ, ಹರ್ಮನ್‌ಪ್ರೀತ್ ಕೌರ್ ನಾಯಕತ್ದದ ಮುಂಬೈ ಇಂಡಿಯನ್ಸ್ ತಂಡ ‘ಎಲಿಮಿನೇಟರ್’ನಲ್ಲಿ ಗೆದ್ದು ಪ್ರಶಸ್ತಿ ಸುತ್ತು ತಲುಪಿದೆ. ಶುಕ್ರವಾರ ನಡೆ ದಿದ್ದ ‘ಎಲಿಮಿನೇಟರ್’ನಲ್ಲಿ ಮುಂಬೈ, 72 ರನ್‌ಗಳಿಂದ ಯುಪಿ ವಾರಿಯರ್ಸ್ ವಿರುದ್ಧ ಗೆದ್ದಿತ್ತು.

ಲೀಗ್ ಹಂತದಲ್ಲಿ ಇವೆರಡು ತಂಡ ಗಳು ಮೊದಲ ಬಾರಿ ಎದುರಾಗಿದ್ದಾಗ ಮುಂಬೈ ಇಂಡಿಯನ್ಸ್ 9 ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಎರಡನೇ ಬಾರಿ ಮುಖಾಮುಖಿಯಾದಾಗ ಡೆಲ್ಲಿ ತಂಡ ಅದೇ ಅಂತರದಿಂದ ಗೆದ್ದು ಸೇಡು ತೀರಿಸಿಕೊಂಡಿತ್ತು. ಇದೀಗ ಮೂರನೇ ಬಾರಿ ಪರಸ್ಪರ ಎದುರಾಗುತ್ತಿದ್ದು, ಗೆಲುವು ಯಾರ ಕೈಹಿಡಿಯಲಿದೆ ಎಂಬ ಕುತೂಹಲ ಗರಿಗೆದರಿದೆ.

ನಾಯಕಿ ಹರ್ಮನ್‌ಪ್ರೀತ್ ಅವರ ಕಳಪೆ ಫಾರ್ಮ್ ಮಾತ್ರ ಮುಂಬೈ ತಂಡದ ಚಿಂತೆಗೆ ಕಾರಣವಾಗಿದೆ. ಉಳಿದಂತೆ ಇತರ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ನಥಾಲಿ ಸಿವೆರ್ ಬ್ರಂಟ್ ಅವರನ್ನು ಕಟ್ಟಿಹಾಕುವ ಸವಾಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಿದೆ. ಇಂಗ್ಲೆಂಡ್‌ನ ಈ ಆಲ್‌ರೌಂಡರ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. 9 ಪಂದ್ಯಗಳಿಂದ ಒಟ್ಟು 272 ರನ್ ಕಲೆಹಾಕಿದ್ದಾರಲ್ಲದೆ, 10 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಹೆಯಿಲಿ ಮ್ಯಾಥ್ಯೂಸ್ (258 ರನ್ ಮತ್ತು 13 ವಿಕೆಟ್) ಅವರ ಆಲ್‌ರೌಂಡ್ ಆಟವೂ ಮುಂಬೈ ತಂಡದ ಬಲ ಹೆಚ್ಚಿಸಿದೆ.

ಬೌಲಿಂಗ್‌ನಲ್ಲಿ ಸೈಕಾ ಇಶಾಕ್ (15 ವಿಕೆಟ್), ಇಸಾಬೆಲ್ ವಾಂಗ್ (13 ವಿಕೆಟ್) ಮತ್ತು ಅಮೇಲಿ ಕೆರ್ (12 ವಿಕೆಟ್) ತಮ್ಮ ಸಾಮರ್ಥ್ಯ ತೋರಿದ್ದಾರೆ.

ಡೆಲ್ಲಿ ತಂಡ ಬ್ಯಾಟಿಂಗ್‌ನಲ್ಲಿ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ಅವರನ್ನು ನೆಚ್ಚಿಕೊಂಡಿದೆ. ಲ್ಯಾನಿಂಗ್ ಒಟ್ಟು 310 ರನ್ ಕಲೆಹಾಕಿದ್ದು, ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮೆರಿಜಾನೆ ಕಾಪ್ (159 ರನ್ ಮತ್ತು 9 ವಿಕೆಟ್) ಅವರ ಆಲ್‌ರೌಂಡ್ ಆಟ ಮತ್ತು ಅಲೀಸ್ ಕ್ಯಾಪ್ಸಿ ಅವರ ಅಬ್ಬರದ ಬ್ಯಾಟಿಂಗ್‌ನ ಬಲ ತಂಡಕ್ಕಿದೆ.

ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಅಲೀಸ್ ಕ್ಯಾಪ್ಸಿ, ರಾಧಾ ಯಾದವ್, ಶಿಖಾ ಪಾಂಡೆ, ಮೆರಿಜಾನೆ ಕಾಪ್, ಟೈಟಸ್ ಸಾಧು, ಲಾರಾ ಹ್ಯಾರಿಸ್, ತಾರಾ ನೊರಿಸ್, ಜೆಸಿಯಾ ಅಖ್ತರ್, ಮಿನ್ನು ಮಣಿ, ತಾನಿಯಾ ಭಾಟಿಯಾ, ಪೂನಂ ಯಾದವ್, ಜೆಸ್ ಜೊನಾಸೆನ್, ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ, ಅಪರ್ಣಾ ಮೊಂಡಲ್

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನಥಾಲಿ ಸಿವೆರ್ ಬ್ರಂಟ್, ಅಮೇಲಿ ಕೆರ್, ಪೂಜಾ ವಸ್ತ್ರಕರ್, ಯಷ್ಟಿಕಾ ಭಾಟಿಯಾ, ಹೆಥರ್ ಗ್ರಹಾಂ, ಇಸಾಬೆಲ್ ವಾಂಗ್, ಅಮನ್‌ಜ್ಯೋತ್ ಕೌರ್, ಧಾರಾ ಗುಜ್ಜಾರ್, ಸೈಕಾ ಇಶಾಕ್, ಹೆಯಿಲಿ ಮ್ಯಾಥ್ಯೂಸ್, ಕ್ಲೋ ಟೈರನ್, ಹುಮೇರಾ ಖಾಜಿ, ಕೋಮಲ್ ಜಂಜದ್, ಪ್ರಿಯಾಂಕಾ ಬಾಲಾ, ಸೋನಂ ಯಾದವ್, ನೀಲಂ ಬಿಷ್ಟ್, ಜಿಂತಮಣಿ ಕಲಿತಾ

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಪೋರ್ಟ್ಸ್ 18 ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.