ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ತಂಡವಾದ ಯುಪಿ ವಾರಿಯರ್ಸ್, ತನ್ನ ಹೆಡ್ ಕೋಚ್ ಜಾನ್ ಲೂಯಿಸ್ ಅವರ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿದೆ. 2023 ರಿಂದ ಅವರು ಈ ಸ್ಥಾನದಲ್ಲಿದ್ದರು.

ಯುಪಿ ವಾರಿಯರ್ಸ್ 2025ರ ಆವೃತ್ತಿಯತಲ್ಲಿ ಐದನೇ ಹಾಗೂ ಕೊನೆಯ ಸ್ಥಾನ ಗಳಿಸಿತ್ತು.

ಕೋಚ್ ಸಾಂಗತ್ಯ ತೊರೆದಿರುವುದನ್ನು ವಾರಿಯರ್ಸ್, ‘ಇನ್ಸ್ಟಾಗ್ರಾಮ್’ನಲ್ಲಿ ಬರೆದುಕೊಂಡಿದೆ. 2023ರಲ್ಲಿ ವಾರಿಯರ್ಸ್ ತಂಡ ಪ್ಲೇಆಫ್ಗೆ ಪ್ರವೇಶಿಸಿತ್ತು. ಆದರೆ ನಂತರ ಆ ವರ್ಷದ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ಗೆ ಮಣಿದಿತ್ತು. 2024ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

ಲೂಯಿಸ್ ಅವರು 2022ರ ನವೆಂಬರ್ನಿಂದ ಇಂಗ್ಲೆಂಡ್ ಮಹಿಳಾ ತಂಡದ ಕೋಚ್ ಆಗಿದ್ದು, ಕಳೆದ ವರ್ಷದ ಮಾರ್ಚ್ನಲ್ಲಿ ಆ ಸ್ಥಾನವನ್ನು ತೊರೆದಿದ್ದರು.

ಲೂಯಿಸ್ ಅವರು ಗ್ಲಾಸ್ಟರ್ಶೈರ್, ಸರೆ ಮತ್ತು ಸಸೆಕ್ಸ್ ಕೌಂಟಿ ತಂಡಗಳಿಗೆ ಆಡಿದ್ದಾರೆ. ಇಂಗ್ಲೆಂಡ್ ತಂಡವನ್ನು ಒಂದು ಟೆಸ್ಟ್, 13 ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.