ವಡೋದರಾ: ಅನಾಬೆಲ್ ಸದರ್ಲೆಂಡ್ (ಔಟಾಗದೇ 41; 26ಕ್ಕೆ2) ಅವರ ಆಲ್ರೌಂಡ್ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ನ (ಡಬ್ಲ್ಯುಪಿಎಲ್) ರೋಚಕ ಹಣಾಹಣಿಯಲ್ಲಿ ಯುಪಿ ವಾರಿಯರ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿತು.

ಕೋತಂಬಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಲೆಗ್ನ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 166 ರನ್ ಗಳಿಸಿತು. ಡೆಲ್ಲಿ ತಂಡವು ಒಂದು ಎಸೆತ ಬಾಕಿ ಇರುವಂತೆ ಮೂರು ವಿಕೆಟ್ಗಳಲ್ಲಿ 167 ರನ್ ಗಳಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು. ಈ ಮೂಲಕ ಸತತ ಐದನೇ ಪಂದ್ಯದಲ್ಲೂ ಚೇಸಿಂಗ್ ತಂಡವೇ ಗೆದ್ದಂತಾಯಿತು.

ಶೆಫಾಲಿ ವರ್ಮಾ (26; 16) ಮತ್ತು ಮೆಗ್ ಲ್ಯಾನಿಂಗ್ (69;49ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ನಂತರದಲ್ಲಿ ಅನಾಬೆಲ್ ಮತ್ತು ಮರಿಜಾನ್ ಕ್ಯಾಪ್ (ಔಟಾಗದೇ 29;17) ತಂಡವನ್ನು ಗೆಲುವಿನ ಗುರಿ ತಲುಪಿಸಿದರು.

ಆಡಿರುವ ಮೂರು ಪಂದ್ಯಗಳಿಂದ 4 ಅಂಕ ಗಳಿಸಿರುವ ಡೆಲ್ಲಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡೂ ಪಂದ್ಯ ಸೋತ ವಾರಿಯರ್ಸ್ ಕೊನೆಯ ಸ್ಥಾನದಲ್ಲಿದೆ. ಆರ್ಸಿಬಿ (4) ಅಗ್ರಸ್ಥಾನದಲ್ಲಿದೆ.

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕಿರಣ್ ನವಗಿರೆ (51; 27ಎ) ಅವರ ಅರ್ಧಶತಕದ ಬಲದಿಂದ ಯುಪಿ ವಾರಿಯರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ಗೆ ಸ್ಪರ್ಧಾತ್ಮಕ ಮೊತ್ತದ ಗುರಿಯೊಡ್ಡಿತು.

ಕಿರಣ್ ಅವರಂತೂ 188.8ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು. 6 ಬೌಂಡರಿ ಮತ್ತು 3 ಸಿಕ್ಸರ್ ಹೊಡೆದರು. ನಂತರ ನಿಯಮಿತಗಳು ವಿಕೆಟ್ಗಳು ಪತನವಾದವು. ಕೊನೆಯ ಹಂತದಲ್ಲಿ ಶ್ವೇತಾ ಸೆಹ್ರಾವತ್ (37; 33ಎ) ಮತ್ತು ಚಿನೆಲೆ ಹೆನ್ರಿ (ಔಟಾಗದೇ 33; 15ಎ) ತಂಡಕ್ಕೆ ಕೊಂಚ ಚೇತರಿಕೆ ನೀಡಿದ್ದರು.

ಸಂಕ್ಷಿಪ್ತ ಸ್ಕೋರು:

ಯು.ಪಿ ವಾರಿಯರ್ಸ್: 20 ಓವರ್ಗಳಲ್ಲಿ 7ಕ್ಕೆ 166 (ಕಿರಣ್ ನವಗಿರೆ 51, ವೃಂದಾ ದಿನೇಶ್ 16, ಶ್ವೇತಾ ಶೆರಾವತ್ 37, ಗ್ರೇಸ್ ಹ್ಯಾರಿಸ್ 12, ಚೈನೆಲೆ ಹೆನ್ರಿ ಔಟಾಗದೇ 33, ಅನಾಬೆಲ್ ಸದರ್ಲೆಂಡ್ 26ಕ್ಕೆ2)

ಡೆಲ್ಲಿ ಕ್ಯಾಪಿಟಲ್ಸ್: 19.5 ಓವರ್ಗಳಲ್ಲಿ 3 ವಿಕೆಟ್ಗೆ 167 (ಶಫಾಲಿ ವರ್ಮಾ 26, ಮೆಗ್ ಲ್ಯಾನಿಂಗ್ 69, ಅನಾಬೆಲ್ ಸದರ್ಲೆಂಡ್ ಔಟಾಗದೇ 41, ಮರಿಜಾನ್ ಕ್ಯಾಪ್ ಔಟಾಗದೇ 29). ಪಂದ್ಯದ ಆಟಗಾರ್ತಿ: ಅನಾಬೆಲ್ ಸದರ್ಲೆಂಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.