ಸಿಂಗಪುರ: ಮುಂದಿನ ಮೂರು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಗಳಿಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ.

ಭಾನುವಾರ ಮುಕ್ತಾಯವಾದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 2027, 2029 ಮತ್ತು 2031ರಲ್ಲಿ ಫೈನಲ್ಗಳು ನಡೆಯಲಿವೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇಲ್ಲಿಯವರೆಗೆ ನಡೆದ ಮೂರು ಡಬ್ಲ್ಯುಟಿಸಿ ಫೈನಲ್ಗಳ ಆತಿಥ್ಯವನ್ನು ವಹಿಸಿತ್ತು. 2021ರಲ್ಲಿ ಸೌತಾಂಪ್ಟನ್ (ಭಾರತ–ನ್ಯೂಜಿಲೆಂಡ್), 2023ರಲ್ಲಿ ಓವಲ್, ಲಂಡನ್ (ಭಾರತ –ಆಸ್ಟ್ರೇಲಿಯಾ) ಮತ್ತು 2025ರಲ್ಲಿ ಲಾರ್ಡ್ಸ್ (ದಕ್ಷಿಣ ಆಫ್ರಿಕಾ–ಆಸ್ಟ್ರೇಲಿಯಾ) ಕ್ರೀಡಾಂಗಣದಲ್ಲಿ ಫೈನಲ್ಗಳು ನಡೆದಿದ್ದವು.

‘ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಮುಂದಿನ ಮೂರು ಡಬ್ಲ್ಯುಟಿಸಿ ಫೈನಲ್ಗಳ ಆತಿಥ್ಯದ ಹಕ್ಕುಗಳನ್ನು ನೀಡಲಾಗಿದೆ. ಮೊದಲ ಮೂರು ಆವೃತ್ತಿಗಳ ಫೈನಲ್ ಗಳನ್ನು ಇಂಗ್ಲೆಂಡ್ ಯಶಸ್ವಿಯಾಗಿ ಆಯೋಜಿಸಿದೆ’ ಎಂದು ಐಸಿಸಿ ಪ್ರಕಟಣೆ ಯಲ್ಲಿ ತಿಳಿಸಿದೆ.

ಡಬ್ಲ್ಯುಟಿಸಿ ಫೈನಲ್ಗಳು ಹೆಚ್ಚಾಗಿ ಜೂನ್ ತಿಂಗಳಲ್ಲಿಯೇ ಆಯೋಜನೆ ಗೊಳ್ಳುತ್ತವೆ. ಆ ಸಂದರ್ಭದಲ್ಲಿ ಇಂಗ್ಲೆಂಡ್ನಲ್ಲಿ ಮಾತ್ರ ಉತ್ತಮ ಹವಾಮಾನ ಇರುತ್ತದೆ. ಆಸ್ಟ್ರೇಲಿಯಾ ದಲ್ಲಿ ಕ್ರಿಕೆಟ್ ಋತುವು ಅಕ್ಟೋಬರ್ ನಿಂದ ಮಾರ್ಚ್ವರೆಗೆ ಇರುತ್ತದೆ. ಆದ್ದರಿಂದ ಫೈನಲ್ ಆಯೋಜನೆಗೆ ಇಂಗ್ಲೆಂಡ್ ಸೂಕ್ತ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

‘ಮುಂದಿನ ಮೂರು ಡಬ್ಲ್ಯುಟಿಸಿ ಫೈನಲ್ ಪಂದ್ಯಗಳ ಆಯೋಜನೆಯ ಅವಕಾಶ ಲಭಿಸಿರುವುದು ನಮಗೆ ತುಂಬ ಸಂತಸ ತಂದಿದೆ’ ಎಂದು ಇ.ಸಿ.ಬಿ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿಚರ್ಡ್ ಗೌಲ್ಡ್ ಹೇಳಿದ್ದಾರೆ.

‘ಚಾರಿತ್ರಿಕವಾದ ಟೆಸ್ಟ್ ಕ್ರಿಕೆಟ್ ಮಾದರಿಯೊಂದಿಗೆ ನಮ್ಮ ದೇಶದ ಜನರು ಹೊಂದಿರುವ ಅವಿನಾಭಾವ ನಂಟಿಗೆ ಲಭಿಸಿರುವ ಗೌರವ ಇದಾಗಿದೆ. ಡಬ್ಲ್ಯುಟಿಸಿ ಫೈನಲ್ಗಳನ್ನು ಆಯೋಜಿಸುವುದು ಹೆಮ್ಮೆಯ ಮತ್ತು ಗೌರವದ ಸಂಗತಿಯಾಗಿದೆ. ಐಸಿಸಿಯೊಂದಿಗೆ ಬೆರೆತು ಯಶಸ್ವಿ ಆಯೋಜನೆ ಮಾಡುತ್ತೇವೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದಲ್ಲಿ ಟೆಸ್ಟ್ ಮಾದರಿಯು ಹೆಚ್ಚು ಜನಪ್ರಿಯವಲ್ಲ. ಒಂದೊಮ್ಮೆ ಭಾರತದಲ್ಲಿ ಫೈನಲ್ ಆಯೋಜಿಸಿದರೆ ಆತಿಥೇಯ ದೇಶವು ಕ್ವಾಲಿಫೈ ಆಗಿಲ್ಲದೇ ಇದ್ದರೆ ಕ್ರೀಡಾಂಗಣಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ.

ನೂತನ ಸಹಸದಸ್ಯ ರಾಷ್ಟ್ರಗಳು: ಎರಡು ದೇಶಗಳಿಗೆ ಈ ಸಂದರ್ಭದಲ್ಲಿ ಐಸಿಸಿಯ ಸಹಸದಸ್ಯತ್ವ ನೀಡಲಾಯಿತು. ಟಿಮೋರ್ ಲೆಸ್ಟೆ ಕ್ರಿಕೆಟ್ ಫೆಡರೇಷನ್ ಮತ್ತು ಜಾಂಬಿಯಾ ಕ್ರಿಕೆಟ್ ಮಂಡಳಿಗಳಿಗೆ ಸದಸ್ಯತ್ವ ಮಂಜೂರು ಮಾಡಲಾಯಿತು. ಇದರೊಂದಿಗೆ ಐಸಿಸಿಯ ಸಹಸದಸ್ಯರ ಸಂಖ್ಯೆ 110ಕ್ಕೇರಿತು.

ಅಮೆರಿಕ ಕ್ರಿಕೆಟ್ ಮಂಡಳಿಗೆ ತನ್ನ ಆಡಳಿತದೊಳಗಿನ ಏರುಪೇರು ಗಳನ್ನು ಸರಿಪಡಿಸಿಕೊಳ್ಳಲು ಮೂರು ತಿಂಗಳುಗಳ ಹೆಚ್ಚುವರಿ ಅವಧಿ ನೀಡಲಾಗಿದೆ. ಈ ಅವಧಿಯಲ್ಲಿ ಶಿಸ್ತು ಮತ್ತು ನಿಯಮಬದ್ಧ ಚುನಾವಣೆ ಯನ್ನು ನಡೆಸಿ ಆಡಳಿತವನ್ನು ಸುಸೂತ್ರಗೊಳಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಮೆರಿಕ ಕ್ರಿಕೆಟ್ ಮಂಡಳಿಯಲ್ಲಿ ಬಹಳ ಸಮಯದಿಂದಲೂ ಗೊಂದಲ ಗಳಿದ್ದು, ಶೀಘ್ರ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.

ಸಭೆಯಲ್ಲಿ ತೆಗೆದುಕೊಂಡ ಇನ್ನುಳಿದ ನಿರ್ಧಾರಗಳಲ್ಲಿ; ಗುರುಮೂರ್ತಿ ಪಳನಿ (ಫ್ರಾನ್ಸ್ ಕ್ರಿಕೆಟ್), ಅನುರಾಗ್ ಭಟ್ನಾಗರ್ (ಕ್ರಿಕೆಟ್ ಹಾಂಗ್ಕಾಂಗ್, ಚೀನಾ) ಮತ್ತು ಗುರುದೀಪ್ ಕ್ಲೇರ್ (ಕ್ರಿಕೆಟ್ ಕೆನಡಾ) ಅವರನ್ನು ಐಸಿಸಿ ಮುಖ್ಯ ಕಾರ್ಯನಿರ್ವಾಹಕರ ಸಮಿತಿ (ಸಿಇಸಿ)ಗೆ ಸಹಸದಸ್ಯ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಗಿದೆ.

ನೇಪಾಳ, ಭೂತಾನ್ ತಂಡಗಳಿಗೆ ಪ್ರಶಸ್ತಿ

ನೇಪಾಳ ಮತ್ತು ಭೂತಾನ್ ಕ್ರಿಕೆಟ್ ಮಂಡಳಿಗಳನ್ನು 2024ರ ಸಾಲಿನ ಐಸಿಸಿ ಅಭಿವೃದ್ಧಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಮೆರಿಕ ತಂಡವು ಸಹಸದಸ್ಯತ್ವ ರಾಷ್ಟ್ರದ ಪುರುಷರ ತಂಡ ವಿಭಾಗದಲ್ಲಿ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದೆ. ಹೋದ ವರ್ಷ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಅಮೆರಿಕ ತಂಡವು ಉತ್ತಮವಾಗಿ ಆಡಿತ್ತು. ಪಾಕಿಸ್ತಾನ ತಂಡದ ಎದುರು ಐತಿಹಾಸಿಕ ಜಯ ಸಾಧಿಸಿತ್ತು. ಕೆನಡಾ ವಿರುದ್ಧ ಗೆದ್ದಿತ್ತು.

ಇಂಡೊನೇಷ್ಯಾ, ನಮಿಬಿಯಾ, ಸ್ಕಾಟ್ಲೆಂಡ್, ತಾಂಜಾನಿಯಾ ಮತ್ತು ವನೌಟು ದೇಶಗಳೂ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.

ಮಹಿಳಾ ಕ್ರಿಕೆಟ್ ಪ್ರೋತ್ಸಾಹ ಯೋಜನೆಯಲ್ಲಿ ಭೂತಾನ್ ಕ್ರಿಕೆಟ್ ಕೌನ್ಸಿಲ್ ಬೋರ್ಡ್ ಮತ್ತು ವನೌಟು ಕ್ರಿಕೆಟ್ ಸಂಸ್ಥೆಗಳು ಇದೇ ಮೊದಲ ಸಲ ಗೌರವಕ್ಕೆ ಪಾತ್ರವಾಗಿದೆ. ಐಸಿಸಿ ವರ್ಷದ ಡಿಜಿಟಲ್ ಅಭಿಮಾನಿಗಳ ಆಕರ್ಷಣೆ ಪುರಸ್ಕಾರ ನೇಪಾಳಕ್ಕೆ ಲಭಿಸಿದೆ.

‘ಐಸಿಸಿ ಅಭಿವೃದ್ಧಿ ಪ್ರಶಸ್ತಿಯ ಜಾಗತಿಕ ವಿಜೇತರನ್ನು ಪ್ರಕಟಿಸಲು ಸಂತಸವಾಗುತ್ತಿದೆ. ಇದು ಸಂಭ್ರಮಿಸುವ ಹೊತ್ತು’ ಎಂದು ಐಸಿಸಿಯ ಮುಖ್ಯಸ್ಥ ಜಯ್ ಶಾ ಹೇಳಿದ್ದಾರೆ.

ಅಫ್ಗಾನಿಸ್ತಾನ ಮಹಿಳಾ ತಂಡಕ್ಕೆ ಐಸಿಸಿ ನೆರವು

ತಾಲಿಬಾನ್ ಆಡಳಿತಕ್ಕೆ ಬೆದರಿ ದೇಶ ತೊರೆದಿರುವ ಅಫ್ಗಾನಿಸ್ತಾನ ಮಹಿಳಾ ಕ್ರಿಕೆಟ್ ಆಟಗಾರ್ತಿ ಯರಿಗೆ ಐಸಿಸಿಯು ಸಂತಸದ ಸುದ್ದಿ ಪ್ರಕಟಿಸಿದೆ.

ಇದೇ ವರ್ಷ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮತ್ತು ಮುಂದಿನ ವರ್ಷ ಇಂಗ್ಲೆಂಡ್ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ಮಹಿಳಾ ತಂಡವನ್ನು ಒಳಗೊಳ್ಳಲು ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ನಿರ್ಣಯಿಸಲಾಯಿತು.

ಮೂರು ಶ್ರೀಮಂತ ಕ್ರಿಕೆಟ್ ಮಂಡಳಿಗಳಾದ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಅಫ್ಗನ್ ಮಹಿಳಾ ಕ್ರಿಕೆಟಿಗರಿಗೆ ನೆರವು ನೀಡಲು ಈ ಹಿಂದೆ ಹರಾರೆಯಲ್ಲಿ ನಡೆದಿದ್ದ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.