ಮಂಗಳವಾರ, ಏಪ್ರಿಲ್ 20, 2021
27 °C

ಕರ್ನಾಟಕ ಹಾಗೂ ಭಾರತಕ್ಕೆ ವಿನಯ್ ಕೊಡುಗೆ ಶ್ಲಾಘನೀಯ: ಅನಿಲ್ ಕುಂಬ್ಳೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ಭಾರತೀಯ ಕ್ರಿಕೆಟಿಗ ಹಾಗೂ ಕರ್ನಾಟಕದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಅವರಿಗೆ ಭಾರತೀಯ ಕ್ರಿಕೆಟ್ ದಿಗ್ಗಜರು ಶುಭ ಹಾರೈಸಿದ್ದಾರೆ.

ಇವರಲ್ಲಿ ಭಾರತದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮೊದಲಿಗರಾಗಿ ಗುರುತಿಸಿಕೊಂಡಿದ್ದು, ವಿನಯ್ ಸಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 

ನಿಮ್ಮ ಅದ್ಭುತ ಕೆರಿಯರ್‌ಗಾಗಿ ವೆಲ್ ಡನ್ ವಿನಯ್. ಕರ್ನಾಟಕ ಕ್ರಿಕೆಟ್ ಹಾಗೂ ಭಾರತಕ್ಕೆ ನಿಮ್ಮ ಕೊಡುಗೆ ಶ್ಲಾಘನೀಯ. ಅಭಿನಂದನೆಗಳು, ಹೆಮ್ಮೆಯಿಂದಲೇ ಹಿಂತಿರುಗಿ ನೋಡಬಹುದು. ಉತ್ತಮ ಭವಿಷ್ಯಕ್ಕೂ ಶುಭ ಕಾಮನೆಗಳು ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

 

 

 

ವಿನಯ್ ನಾಯಕತ್ವದಡಿಯಲ್ಲಿ ಆಡಿರುವ ಸಹ ಆಟಗಾರ ಮಯಂಕ್ ಅಗರವಾಲ್ ಸಹ ಅದ್ಭುತ ಕೆರಿಯರ್‌ಗಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಅನೇಕ ಆಟಗಾರರಿಗೆ ಸ್ಫೂರ್ತಿಯಾಗಿರುವ ವಿನಯ್ ಅದ್ಭುತ ನೆನಪುಗಳನ್ನು ಸೃಷ್ಟಿಸಿದ್ದಾರೆ. ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.

 

 

 

 

ಸ್ನೇಹಿತನ ವೃತ್ತಿ ಜೀವನಕ್ಕೆ ಶಾಭಾಸ್ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಅಲ್ಲದೆ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.

 

 

 

 

ವಿನಯ್ ಕುಮಾರ್ ಅವರನ್ನು ಸಹೋದರ ಎಂದು ಸಂಭೋಧಿಸಿರುವ ಸುರೇಶ್ ರೈನಾ ಅಭನಂದನೆಗಳನ್ನು ಸಲ್ಲಿಸಿದ್ದು, ಶುಭಹಾರೈಕೆಯ ಟ್ವೀಟ್ ಮಾಡಿದ್ದಾರೆ.

 

 

 

 

ಪ್ರಗ್ಯಾನ್ ಓಜಾ ಶುಭ ಹಾರೈಕೆ

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು