ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ಮಿ,ಲಾಕಿ ದಾಳಿಗೆ ನಲುಗಿದ ಅಫ್ಗಾನ್: ನ್ಯೂಜಿಲೆಂಡ್‌ ಗೆ ಜಯ

Last Updated 8 ಜೂನ್ 2019, 20:22 IST
ಅಕ್ಷರ ಗಾತ್ರ

ಟಾಂಟನ್ (ಎಎಫ್‌ಪಿ): ವೇಗಿಗಳಾದ ಜಿಮ್ಮಿ ನೀಶಮ್ ಮತ್ತು ಲಾಕಿ ಫರ್ಗ್ಯು ಸನ್ ಅವರ ಪರಿಣಾಮಕಾರಿ ದಾಳಿಗೆ ನಲುಗಿದ ಅಫ್ಗಾನಿಸ್ತಾನ ತಂಡ ನ್ಯೂಜಿಲೆಂಡ್‌ ಎದುರು ಸೋಲು ಕಂಡಿದೆ.

ಮಳೆ ಅಡ್ಡಿಪಡಿಸಿದ ಪಂದ್ಯ ಒಂದು ತಾಸು ತಡವಾಗಿ ಆರಂಭ ಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನದ ಆರಂಭಿಕ ಜೋಡಿ ಹಜರತ್ ಜಜಾಯ್ ಮತ್ತು ನೂರ್ ಅಲಿ ಜದ್ರಾನ್ 66 ರನ್‌ಗಳನ್ನು ಜೋಡಿಸಿದರು. ಆದರೆ ನಂತರ ತಂಡ ಕುಸಿತ ಕಂಡಿತು. ಲಾಕಿ ಮೂರು ಮತ್ತು ನೀಶಮ್ ಐದು ವಿಕೆಟ್ ಕಬಳಿಸಿದರು. ಹಶ್ಮತ್ ಉಲ್ಲಾ (59; 99 ಎಸೆತ, 9 ಬೌಂಡರಿ) ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿದರು.

ನ್ಯೂಜಿಲೆಂಡ್‌ ಪರವಾಗಿ ಕೇನ್‌ ವಿಲಿಯಮ್ಸ್‌ 79 ಹಾಗೂ ರಾಸ್‌ ಟೇಲರ್ 49 ರನ್‌ಗಳ ನೆರವಿನಿಂದಅಫ್ಗಾನಿಸ್ತಾನ ತಂಡವನ್ನು ಸೋಲಿಸಿತು. 32 ಓವರ್‌ಗಳಲ್ಲಿ 173 ರನ್‌ಗಳ ಗುರಿ ಮುಟ್ಟಿದ ನ್ಯೂಜಿಲೆಂಡ್‌ 7 ವಿಕೆಟ್‌ಗಳ ಜಯ ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್: ಅಫ್ಗಾನಿಸ್ತಾನ: 41.1 ಓವರ್‌ಗಳಲ್ಲಿ 172 (ಹಜರತ್ ಜಜಾಯ್ 34, ನೂರ್ ಅಲಿ ಜದ್ರಾನ್ 31, ಹಶ್ಮತ್ ಉಲ್ಲಾ ಶಾಹಿದಿ 59; ಲಾಕಿ ಫರ್ಗ್ಯುಸನ್ 37ಕ್ಕೆ4, ಜಿಮ್ಮಿ ನೀಶಮ್ 31ಕ್ಕೆ5, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 14ಕ್ಕೆ1).

ನ್ಯೂಜಿಲೆಂಡ್ : 32ಓವರ್‌ಗಳಲ್ಲಿ 173/3 (ಕೇನ್‌ ವಿಲಿಯಮ್ಸ್‌ 79 ಹಾಗೂ ರಾಸ್‌ ಟೇಲರ್ 49)

ಫಲಿತಾಂಶ:ನ್ಯೂಜಿಲೆಂಡ್‌ಗೆ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT