ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಡೋನಾಗೆ ಗೌರವ; ಮೆಸ್ಸಿಗೆ ದಂಡ!

Last Updated 4 ಡಿಸೆಂಬರ್ 2020, 3:01 IST
ಅಕ್ಷರ ಗಾತ್ರ

ಬಾರ್ಸಿಲೋನಾ (ಎಪಿ): ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಡಿಯೇಗೊ ಮರಡೋನಾ ಅವರ ನಿಧನಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದ ಲಯೊನೆಲ್ ಮೆಸ್ಸಿ ಈಗ ಸ್ಪಾನಿಷ್ ಸಾಕರ್ ಫೆಡರೇಷನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರಿಗೆ ₹ 54 ಸಾವಿರ ದಂಡ ವಿಧಿಸಿದೆ.

ಹೋದ ಭಾನುವಾರ ಸ್ಪಾನಿಷ್ ಲೀಗ್‌ ಫುಟ್‌ಬಾಲ್‌ನಲ್ಲಿ ಮೆಸ್ಸಿ ಪ್ರತಿನಿಧಿಸುವ ಬಾರ್ಸಿಲೋನಾ ತಂಡವು 4–0 ಗೋಲುಗಳಿಂದ ಒಸಾಸುನಾ ವಿರುದ್ಧ ಗೆದ್ದಿತ್ತು. ಪಂದ್ಯದ ನಂತರ ಮೆಸ್ಸಿ ತಮ್ಮ ಕ್ಲಬ್‌ನ ನೀಲಿ–ಕಂದು ಬಣ್ಣಗಳಿರುವ ಜೆರ್ಸಿಯನ್ನು ತೆಗೆದಿದ್ದರು. ಅದರೊಂದಿಗೆ ತಾವು ಧರಿಸಿದ್ದ ಇನ್ನೊಂದು ಕೆಂಪು ಮತ್ತು ಕಪ್ಪು ಬಣ್ಣಗಳ ಸಂಯೋಜನೆಯಿದ್ದ ಜೆರ್ಸಿಯನ್ನು ಪ್ರದರ್ಶಿಸಿದ್ದರು. ಅದು ಮರಡೋನಾ ಅವರು ನೆವೆಲ್ಸ್‌ ಓಲ್ಡ್‌ ಬಾಯ್ಸ್‌ ಕ್ಲಬ್‌ನಲ್ಲಿ ಧರಿಸಿ ಆಡಿದ್ದ ಜೆರ್ಸಿಯಾಗತ್ತು.

ಅದರ ಮೇಲೆ ’ಡಿಯೆಗೊಗೆ ಬೀಳ್ಕೊಡುಗೆ‘ ಎಂದು ಬರೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT