ಬುಧವಾರ, ಡಿಸೆಂಬರ್ 2, 2020
25 °C

ಡಿಸೆಂಬರ್ 21ರಂದು ಎಐಎಫ್‌ಎಫ್‌ ಎಜಿಎಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ವಾರ್ಷಿಕ ಸಾಮಾನ್ಯ ಸಭೆಯು (ಎಜಿಎಂ) ಆನ್‌ಲೈನ್‌ ಮೂಲಕ ಡಿಸೆಂಬರ್‌ 21ರಂದು ನಡೆಯಲಿದೆ. ಫೆಡರೇಷನ್‌ ಗುರುವಾರ ಈ ವಿಷಯ ತಿಳಿಸಿದೆ.

ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಎಐಎಫ್‌ಎಫ್‌ ಅಧ್ಯಕ್ಷ ಹುದ್ದೆಯ ಅಧಿಕಾರದ ಮಿತಿ ಮತ್ತು ಇತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸದ್ಯ ಹುದ್ದೆಯಲ್ಲಿರುವ ಕೇಂದ್ರದ ಮಾಜಿ ಸಚಿವ ಪ್ರಫುಲ್‌ ಪಟೇಲ್‌ ಅಧ್ಯಕ್ಷರಾಗಿ 12 ವರ್ಷಗಳನ್ನು ಪೂರೈಸಿದ್ದಾರೆ.

ಕ್ರೀಡಾ ಸಂಹಿತೆಯ ಅನ್ವಯ, ರಾಷ್ಟ್ರೀಯ ಕ್ರೀಡಾ ಫಡರೇಷನ್‌ನ ಅಧ್ಯಕ್ಷರೊಬ್ಬರು ಗರಿಷ್ಠ 12 ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿ ಇರಬಹುದಾಗಿದೆ.

ಈ ಮೊದಲು ದೀರ್ಘಕಾಲ ಅಧ್ಯಕ್ಷರಾಗಿದ್ದ ಪ್ರಿಯ ರಂಜನ್‌ ದಾಸ್‌ಮುನ್ಷಿ 2008ರಲ್ಲಿ ಹೃದಯ ಸ್ತಂಭನಕ್ಕೊಳಗಾಗಿ ಕೋಮಾಕ್ಕೆ ಜಾರಿದ್ದರು. ಆ ಬಳಿಕ ಒಂದು ವರ್ಷ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪ್ರಫುಲ್‌ ಪಟೇಲ್‌, 2009ರ ಅಕ್ಟೋಬರ್‌ನಲ್ಲಿ ಪೂರ್ಣಾವಧಿ ಅಧ್ಯಕ್ಷರಾಗಿ ಆಯ್ಕೆಯಾದರು. 2012 ಹಾಗೂ 2016ರ ಚುನಾವಣೆಗಳಲ್ಲಿ ಮರು ಆಯ್ಕೆಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು