2005ರಿಂದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವ ಚೆಟ್ರಿ ಈ ವರೆಗೆ 103 ಪಂದ್ಯಗಳಿಂದ 65 ಗೋಲು ಗಳಿಸಿದ್ದಾರೆ. ಆದರೆ ಏಷ್ಯಾಕಪ್ನಲ್ಲಿ ತಂಡ ನಾಕೌಟ್ ಹಂತ ಪ್ರವೇಶಿಸಬೇಕಾದರೆ ಲಾಲ್ಫೆಕ್ಲುವಾ ಕೂಡ ಚೆನ್ನಾಗಿ ಆಡಬೇಕು ಎಂಬುದು ಫುಟ್ಬಾಲ್ ಪ್ರಿಯರ ಆಶಯ. ಟೂರ್ನಿ ಜನವರಿ ಐದರಿಂದ ಫೆಬ್ರುವರಿ ಒಂದರ ವರೆಗೆ ಯುಎಇಯಲ್ಲಿ ನಡೆಯಲಿದೆ.