ಸೋಮವಾರ, ಜುಲೈ 4, 2022
22 °C

ಐಎಸ್‌ಎಲ್‌: ನಿರಾಸೆಯ ಕೂಪದಲ್ಲಿ ಚೆನ್ನೈಯಿನ್‌

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ತಂಡ ಮತ್ತೊಮ್ಮೆ ನಿರಾಸೆಯ ಕೂಪಕ್ಕೆ ಬಿತ್ತು. ಭಾನುವಾರ ರಾತ್ರಿ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಚೆನ್ನೈಯಿನ್‌ ತಂಡ ಎಟಿಕೆಗೆ 2–3ರಿಂದ ಮಣಿಯಿತು. ಇದರೊಂದಿಗೆ ತಂಡದ ನಾಕೌಟ್ ಹಂತದ ಹಾದಿ ಇನ್ನಷ್ಟು ಕಠಿಣವಾಯಿತು.

44 ಹಾಗೂ 80ನೇ ನಿಮಿಷಗಳಲ್ಲಿ ಲಭಿಸಿದ ಪೆನಾಲ್ಟಿ ಅವಕಾಶಗಳಲ್ಲಿ ಗೋಲು ಗಳಿಸಿದ ಮ್ಯಾನ್ವೆಲ್‌ ಲಾನ್ಜೆರೊಟ್ ಮತ್ತು 14ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಜಯೇಶ್ ರಾಣೆ, ಎಟಿಕೆಯ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಚೆನ್ನೈಯಿನ್‌ ಪರ 24ನೇ ನಿಮಿಷದಲ್ಲಿ ತೊಯಿ ಸಿಂಗ್ ಗೋಲು ಗಳಿಸಿದರು. 88ನೇ ನಿಮಿಷದಲ್ಲಿ ಐಸಾಕ್ ವನಮಾಲಸೌಮ ಗಳಿಸಿದ ಗೋಲಿನಿಂದ ತಂಡದ ಸೋಲಿನ ಅಂತರ ಕಡಿಮೆ ಆಯಿತು.

ಡೈನಾಮೋಸ್‌ಗೆ ಮುಂಬೈ ಸವಾಲು: ಟೂರ್ನಿಯಲ್ಲಿ ಈ ವರೆಗೆ ಜಯ ಕಾಣದ ಡೆಲ್ಲಿ ಡೈನಾಮೋಸ್ ತಂಡ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಎದುರು ಸೆಣಸಲಿದೆ. ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಒಂಬತ್ತು ಪಂದ್ಯಗಳಲ್ಲಿ ನಾಲ್ಕನ್ನು ಡ್ರಾ ಮಾಡಿಕೊಂಡಿರುವ ಡೆಲ್ಲಿ ಐದರಲ್ಲಿ ಸೋತಿದೆ.ಪಾಯಿಂಟ್ ಪಟ್ಟಿಯಲ್ಲಿ ಈ ತಂಡ ಕೊನೆಯ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ಎಂಟು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿದೆ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು ಎರಡರಲ್ಲಿ ಸೋತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು