ಭಾನುವಾರ, ಜುಲೈ 3, 2022
27 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಟಿಕೆಎಂಬಿ ಎದುರಾಳಿ

ಗೆಲುವಿನ ಛಲದಲ್ಲಿ ಮುಂಬೈ ಸಿಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್‌: ಅಜೇಯ ಓಟವನ್ನು ಮುಂದುವರಿಸುವ ತವಕದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವನ್ನು ಎದುರಿಸಲಿದೆ.

ಫಟೋರ್ಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿಯು, ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ತಂಡಗಳ ಪೈಪೋಟಿಗೆ ಸಾಕ್ಷಿಯಾಗಲಿದೆ. ಕಳೆದ ಎಂಟು ಪಂದ್ಯಗಳ ಪೈಕಿ ಮುಂಬೈ ತಂಡವು ಏಳರಲ್ಲಿ ಗೆಲುವು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಮಾತ್ರ ಸೋತಿದ್ದ ಆ ತಂಡದ ಬಳಿ ಸದ್ಯ 22 ಪಾಯಿಂಟ್‌ಗಳಿವೆ.

ಮುಂಬೈಗಿಂತ ಎರಡು ಪಾಯಿಂಟ್ಸ್ ಹಿಂದಿರುವ ಎಟಿಕೆಎಂಬಿ ತಂಡವು ಆರು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಎರಡರಲ್ಲಿ ಡ್ರಾ ಹಾಗೂ ಒಂದು ಪಂದ್ಯದಲ್ಲಿ ಸೋತಿದೆ. ಈ ಹಿಂದಿನ ಐದು ಪಂದ್ಯಗಳಲ್ಲಿ ಆ ತಂಡ ಸೋತಿಲ್ಲ ಎಂಬುದು ಗಮನಾರ್ಹ.

ಶ್ರೇಷ್ಠ ಆಕ್ರಮಣ ವಿಭಾಗವನ್ನು ಹೊಂದಿರುವ ಮುಂಬೈ ಸಿಟಿ ತಂಡ ಇದುವರೆಗೆ 16 ಗೋಲುಗಳನ್ನು ಗಳಿಸಿದೆ. ಎಟಿಕೆಎಂಬಿ ತಂಡದ ಡಿಫೆನ್ಸ್ ವಿಭಾಗವೂ ಅಷ್ಟೇ ಪ್ರಬಲವಾಗಿದೆ. ಆ ತಂಡ ಒಂಬತ್ತು ಪಂದ್ಯಗಳಲ್ಲಿ ಏಳು ಬಾರಿ ಕ್ಲೀನ್‌ಶೀಟ್‌ ಸಾಧಿಸಿದೆ.

ಉಭಯ ತಂಡಗಳ ಅಂಕಿ ಅಂಶಗಳನ್ನು ಗಮನಿಸಿದರೆ ಈ ಪಂದ್ಯವು ಶ್ರೇಷ್ಠ ಆಕ್ರಮಣ ಮತ್ತು ಡಿಫೆನ್ಸ್ ವಿಭಾಗಗಳ ನಡುವಣ ಪೈಪೋಟಿ ಆಗುವ ಎಲ್ಲ ಸಾಧ್ಯತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು