ಮಂಗಳವಾರ, ಮಾರ್ಚ್ 31, 2020
19 °C

ಗ್ಲಾಸ್ಗೊದಲ್ಲೇ ಉಳಿದ ಬಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ಕಾಟಿಷ್‌ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಕ್ಲಬ್‌, ರೇಂಜರ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ  ಫುಟ್ಬಾಲ್‌ ಆಟಗಾರ್ತಿ ಎಂಬ ಹಿರಿಮೆಯ ಬಾಲಾದೇವಿ, ಇನ್ನಷ್ಟು ದಿನ ಗ್ಲಾಸ್ಗೊದಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರ ವಿಧಿಸಿದ ಪ್ರವಾಸ ನಿರ್ಬಂಧಗಳ ಕಾರಣ ಅವರ ಈ ಸ್ಥಿತಿಗೆ ಕಾರಣ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪ್ರೀಮಿಯರ್‌ ಲೀಗ್‌ಅನ್ನು ಏಪ್ರಿಲ್‌ 30ಕ್ಕೆ ಮುಂದೂಡಲಾಗಿದೆ. 30 ವರ್ಷದ ಬಾಲಾದೇವಿ ಅವರ ಕೈಯಲ್ಲಿ ಈಗ ಯಾವುದೇ ಟೂರ್ನಿಗಳಿಲ್ಲ. ಹೀಗಾಗಿ ಅವರು ಭಾರತಕ್ಕೆ ಮರಳಬೇಕಿತ್ತು. ಮಾರ್ಚ್‌ 22ರಿಂದ 31ರವರೆಗೆ ವಿದೇಶದಿಂದ ಬರುವ ಎಲ್ಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸರ್ಕಾರ, ಗುರುವಾರ ಸ್ಥಗಿತಗೊಳಿಸಿದ್ದರಿಂದ ಬಾಲಾ ದೇವಿ ಇನ್ನಷ್ಟು ದಿನಗಳನ್ನು ಗ್ಲಾಸ್ಗೊದಲ್ಲಿ ಕಳೆಯಬೇಕಿದೆ.

ಸದ್ಯ ಬಾಲಾದೇವಿ ಗ್ಲಾಸ್ಗೋದಲ್ಲಿ ತರಬೇತಿಯಲ್ಲಿ ನಿರತರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು