ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಪಯನೀರ್ ವಿಮೆನ್ಸ್‌ ಮತ್ತು ಪಾಸ್ ಎಫ್‌ಸಿ ಪಂದ್ಯ ಡ್ರಾ; ಎರಡು ಗೋಲು ಗಳಿಸಿ ಮಿಂಚಿದ ಶಿವಾನಿ

ಫುಟ್‌ಬಾಲ್‌: ಬೆಂಗಳೂರು ಬ್ಲೂಸ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ಅಮೋಘ ಆಟವಾಡಿದ ಬೆಂಗಳೂರು ಬ್ಲೂಸ್ ಎಫ್‌ಸಿ ತಂಡ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸ್ಪೋರ್ಟಿಂಗ್ ಪ್ಲಾನೆಟ್ ಟ್ರೋಫಿ ಮಹಿಳೆಯರ ‘ಎ’ ಡಿವಿಷನ್ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು. 

ಗುರುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಬ್ಲೂಸ್‌ 4–0ಯಿಂದ ಜೋ‘ಸ್‌ ಯುನೈಟೆಡ್ ತಂಡವನ್ನು ಮಣಿಸಿತು. 14ನೇ ನಿಮಿಷದಲ್ಲಿ ಮೆಹರ್ ಗಳಿಸಿದ ಗೋಲಿನೊಂದಿಗೆ ತಂಡ ಖಾತೆ ತೆರೆದಿತ್ತು. 32ನೇ ನಿಮಿಷದಲ್ಲಿ ಲಿಶಾ ಮುನ್ನಡೆ ಹೆಚ್ಚಿಸಿದರು. 55 ಮತ್ತು 59ನೇ ನಿಮಿಷಗಳಲ್ಲಿ ಶಿವಾನಿ ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರವನ್ನು ಹಿಗ್ಗಿಸಿದರು. 

ಪಯನೀರ್ ವಿಮೆನ್ಸ್‌ ಮತ್ತು ಪಾಸ್ ಎಫ್‌ಸಿ ನಡುವಿನ ಪಂದ್ಯ 1–1ರಲ್ಲಿ ಸಮವಾಯಿತು. ಪಯನೀರ್ ಪರವಾಗಿ 16ನೇ ನಿಮಿಷದಲ್ಲಿ ರೂಪಾ ಮತ್ತು ಪಾಸ್ ಪರವಾಗಿ 46ನೇ ನಿಮಿಷದಲ್ಲಿ ಐಶ್ವರ್ಯ ಗೋಲು ಗಳಿಸಿದರು.

ಶುಕ್ರವಾರ ‘ಎ’ ಗುಂಪಿನ ಪಂದ್ಯದಲ್ಲಿ ಯುನೈಟೆಡ್ ಎಫ್‌ಸಿ ಕೊಡಗು ಮತ್ತು ಸಾಯಿ ಸ್ಪೋರ್ಟ್ಸ್‌ ಅಕಾಡೆಮಿ ತಂಡಗಳು ಸೆಣಸಲಿವೆ. ಪಂದ್ಯ ಸಂಜೆ 4 ಗಂಟೆಗೆ ನಡೆಯಲಿದೆ.

ಬೆಂಗಳೂರು ಪ್ರೊ ಫುಟ್‌ಬಾಲ್ ಲೀಗ್ ಪಂದ್ಯಗಳು

ಎಫ್‌ಎಸ್‌ವಿ ಅರೆನಾದಲ್ಲಿ ಬೆಂಗಳೂರು ಪ್ರೊ ಫುಟ್‌ಬಾಲ್ ಲೀಗ್‌ನಲ್ಲಿ ಸೆಪ್ಟೆಂಬರ್‌ 11ರ ಶನಿವಾರ ನಾಲ್ಕು ಪಂದ್ಯಗಳು ನಡೆಯಲಿವೆ. ‘ಸಿ’ ಗುಂಪಿನಲ್ಲಿ ಎಫ್‌ಸಿ ಹೈದ್ರಾ ಮತ್ತು ರಾಮನ್ ಸ್ಪೋರ್ಟ್ಸ್ ಅಕಾಡೆಮಿ ತಂಡಗಳು ಬೆಳಿಗ್ಗೆ 11 ಗಂಟೆಗೆ ಸೆಣಸಲಿವೆ. ‘ಡಿ’ ಗುಂಪಿನ ಪಂದ್ಯ 12 ಗಂಟೆಗೆ ನಡೆಯಲಿದ್ದು ಎಫ್‌ಎಬಿ ಮತ್ತು ಎಂಆರ್‌ಯುಎಫ್‌ಸಿ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. 1 ಗಂಟೆಗೆ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಬಿಪಿಎಸ್‌ಎಸ್‌ ಮತ್ತು ರೊನಾಲ್ಡೊ ತಂಡಗಳು, 2 ಗಂಟೆಗೆ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಬಿವೈಎಫ್‌ಎಲ್ ಮತ್ತು ಬೊಕ್ಯಾ ಅಕಾಡೆಮಿ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು