ಫುಟ್‌ಬಾಲ್‌: ಬಾರ್ಸಿಲೋನಾಕ್ಕೆ ಜಯ

ಭಾನುವಾರ, ಮಾರ್ಚ್ 24, 2019
34 °C

ಫುಟ್‌ಬಾಲ್‌: ಬಾರ್ಸಿಲೋನಾಕ್ಕೆ ಜಯ

Published:
Updated:
Prajavani

ಮ್ಯಾಡ್ರಿಡ್‌ : ಇವಾನ್‌ ರ‍್ಯಾಕಿಟಿಕ್‌ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಎಫ್‌ಸಿ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ.

ಸ್ಯಾಂಟಿಯಾಗೊ ಬರ್ನಾಬೀವು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪೈಪೋಟಿಯಲ್ಲಿ ಬಾರ್ಸಿಲೋನಾ 1–0 ಗೋಲಿನಿಂದ ಸಾಂ‍ಪ್ರದಾಯಿಕ ಎದುರಾಳಿ ರಿಯಲ್ ಮ್ಯಾಡ್ರಿಡ್‌ ತಂಡವನ್ನು ಪರಾಭವಗೊಳಿಸಿತು.

ಈ ಜಯದೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 60ಕ್ಕೆ ಹೆಚ್ಚಿಸಿಕೊಂಡಿರುವ ಬಾರ್ಸಿಲೋನಾ ತಂಡ ಪ್ರಶಸ್ತಿಯ ಹಾದಿಯನ್ನು ಸುಗಮ ಮಾಡಿಕೊಂಡಿದೆ. 26 ಪಂದ್ಯಗಳನ್ನು ಆಡಿರುವ ಈ ತಂಡ 18ರಲ್ಲಿ ಗೆದ್ದಿದ್ದು ಎರಡರಲ್ಲಷ್ಟೇ ಸೋತಿದೆ. 48 ಪಾಯಿಂಟ್ಸ್‌ ಹೊಂದಿರುವ ಮ್ಯಾಡ್ರಿಡ್‌ ಮೂರನೇ ಸ್ಥಾನದಲ್ಲಿದೆ.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಉಭಯ ತಂಡಗಳು ಆರಂಭದಿಂದಲೇ ಚುರುಕಿನ ಸಾಮರ್ಥ್ಯ ತೋರಿದವು. ಹೀಗಾಗಿ ಮೊದಲ 20 ನಿಮಿಷಗಳ ಆಟ ಗೋಲು ರಹಿತವಾಗಿತ್ತು.

ನಂತರ ಬಾರ್ಸಿಲೋನಾ ತಂಡದ ಆಟ ರಂಗೇರಿತು. 26ನೇ ನಿಮಿಷದಲ್ಲಿ ಇವಾನ್‌ ಕಾಲ್ಚಳಕ ತೋರಿದರು. ತವರಿನ ಅಭಿಮಾನಿಗಳ ಎದುರು ಆಡಿದ ರಿಯಲ್‌ ಮ್ಯಾಡ್ರಿಡ್‌ ನಂತರದ ಅವಧಿಯಲ್ಲಿ ಸಮಬಲದ ಗೋಲು ಹೊಡೆಯಲು ಸಾಕಷ್ಟು ಪ್ರಯತ್ನಿಸಿತು. ಬಾರ್ಸಿಲೋನಾ ತಂಡದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ಆತಿಥೇಯ ತಂಡದ ಆಟಗಾರರಿಗೆ ಆಗಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !