ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಬಿಎಫ್‌ಸಿ, ಐಟಿಗೆ ಪ್ರಶಸ್ತಿ

ಸಿ.ಪುಟ್ಟಯ್ಯ, ಪ್ರಸನ್ನಕುಮಾರ್‌ ಸ್ಮಾರಕ ಫುಟ್‌ಬಾಲ್‌ ಟೂರ್ನಿ: ಎಂಇಜಿ, ಡಿವೈಇಎಸ್‌ ರನ್ನರ್ ಅಪ್‌
Last Updated 14 ಅಕ್ಟೋಬರ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಫ್‌ಸಿ ಮತ್ತು ಆದಾಯ ತೆರಿಗೆ ಇಲಾಖೆ ತಂಡಗಳು ಬಿಡಿಎಫ್‌ಎ ಆಯೋಜಿಸಿದ್ದ ಫುಟ್‌ಬಾಲ್ ಟೂರ್ನಿ ಗಳಲ್ಲಿ ಕ್ರಮವಾಗಿ ಸಿ.ಪುಟ್ಟಯ್ಯ ಮತ್ತು ಪ್ರಸನ್ನ ಕುಮಾರ್‌ ಸ್ಮಾರಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವು.

ಭಾನುವಾರ ನಡೆದ ಪುಟ್ಟಯ್ಯ ಸ್ಮಾರಕ ಸೂಪರ್ ಡಿವಿಷನ್ ಟೂರ್ನಿಯ ಫೈನಲ್‌ನಲ್ಲಿ ಬಿಎಫ್‌ಸಿ ತಂಡ ಎಂಇಜಿ ಮತ್ತು ಸೆಂಟರ್‌ ವಿರುದ್ಧ 2–1ರಿಂದ ಗೆದ್ದು ಎರಡನೇ ಬಾರಿ ಪ್ರಶಸ್ತಿ ಎತ್ತಿಹಿಡಿಯಿತು.

ಲಾಲೆಂಗ್‌ ಜಮಾ (41ನೇ ನಿಮಿಷ) ಮತ್ತು ರಾಹುಲ್‌ (56ನೇ ನಿ) ಬಿಎಫ್‌ಸಿ ಪರ ಗೋಲು ಗಳಿಸಿದರೆ, ಎಂಇಜಿ ತಂಡದ ಏಕೈಕ ಗೋಲು ಮೈರಾನ್ ಮೆಂಡಿಸ್ (85ನೇ ನಿ) ಅವರಿಂದ ಮೂಡಿಬಂತು.

ಪ್ರಸನ್ನ ಕುಮಾರ್ ಸ್ಮಾರಕ ‘ಎ’ ಡಿವಿಷನ್‌ ಟೂರ್ನಿಯ ಫೈನಲ್‌ನಲ್ಲಿ ಆದಾಯ ತೆರಿಗೆ ಇಲಾಖೆ ತಂಡ ಡಿವೈಇಎಸ್‌ ತಂಡವನ್ನು 1–0ಯಿಂದ ಮಣಿಸಿತು. ಪಂದ್ಯದ ಏಕೈಕ ಗೋಲು ಸುಜಿತ್ ಕುಮಾರ್‌ (56ನೇ ನಿ) ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT