ಶನಿವಾರ, ಏಪ್ರಿಲ್ 4, 2020
19 °C

ಬಿಡಿಎಫ್‌ಎ ‘ಬಿ’ ಡಿವಿಷನ್ ಲೀಗ್ 26ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಡಿಎಫ್‌ಎ (ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ) ಬೆಂಗಳೂರು ಬ್ಲೂಸ್ ಕಪ್‌ಗಾಗಿ ಆಯೋಜಿಸುವ ‘ಬಿ’ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ ಇದೇ 26ರಿಂದ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ನಡೆಯಲಿದೆ. 

ಒಟ್ಟು 15 ತಂಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು ‘ಎ’ ಗುಂಪಿನಲ್ಲಿ ಸನ್‌ರೈಸ್, ಗೋವನ್ಸ್, ವೆಹಿಕಲ್ಸ್, ಡಿವೈಇಎಸ್‌, ಬೆಂಗಳೂರು ಮಾರ್ಸ್‌, ಫ್ರೆಂಡ್ಸ್ ಯುನೈಟೆಡ್‌, ಸೌತ್ ಇಂಡಿಯಾ ಮತ್ತು ತಿಲಕ್ ಮೆಮೋರಿಯಲ್ ಎಫ್‌ಸಿ ತಂಡಗಳು ಇವೆ. ‘ಬಿ’ ಗುಂಪಿನಲ್ಲಿ ಎಚ್‌ಎಎಲ್, ಶ್ರೀ ಗಜಾನನ, ಮೊಹಮ್ಮದ್ ಸ್ಪೋರ್ಟಿಂಗ್‌, ರೆಬೆಲ್ಸ್‌, ಆರ್‌.ಎಸ್‌.ಸ್ಪೋರ್ಟ್ಸ್‌, ಬ್ಲಿಟ್ಜ್‌, ರಾಯಲ್ಸ್‌ ತಂಡಗಳು ಇವೆ. ‌

ಪ್ರತಿದಿನ ಮಧ್ಯಾಹ್ನ 2 ಮತ್ತು 3.30ಕ್ಕೆ ಪಂದ್ಯಗಳು ಇರುತ್ತವೆ. ಮೊದಲ ದಿನ ಫ್ರೆಂಡ್ಸ್‌ ಯುನೈಟೆಡ್‌ ಮತ್ತು ಗೋವನ್ಸ್ ಎಫ್‌ಸಿ ತಂಡಗಳು ಮೊದಲ ಪಂದ್ಯದಲ್ಲೂ ಸೌತ್ ಇಂಡಿಯಾ ಮತ್ತು ಬೆಂಗಳೂರು ಮಾರ್ಸ್ ತಂಡಗಳು ಎರಡನೇ ಪಂದ್ಯದಲ್ಲೂ ಸೆಣಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು