ಪ್ರತಿಭಟನೆ: ಪಂದ್ಯ ರದ್ದು

7

ಪ್ರತಿಭಟನೆ: ಪಂದ್ಯ ರದ್ದು

Published:
Updated:
Deccan Herald

ಬೆಂಗಳೂರು: ರೆಫರಿಯ ತೀರ್ಪಿಗೆ ಅಸ ಮಾಧಾನ ವ್ಯಕ್ತಪಡಿಸಿ ತಂಡ ಅಂಗಣಕ್ಕೆ ಇಳಿಯದ ಕಾರಣ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ ಫುಟ್‌ಬಾಲ್ ಪಂದ್ಯವನ್ನು ರದ್ದು ಮಾಡ ಲಾಯಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಕಂಟ್ರಾಲರೇಟ್ ಆಫ್ ಇನ್‌ಸ್ಪೆಕ್ಷನ್‌ ಇಲೆಕ್ಟ್ರಾನಿಕ್ಸ್‌ (ಸಿಐಎಲ್‌) ಮತ್ತು ಜವಾಹರ್‌ ಯೂನಿಯನ್ ಎಫ್‌ಸಿ ನಡುವೆ ಬುಧವಾರ ಪಂದ್ಯ ನಡೆದಿತ್ತು. ಮುಕ್ತಾಯಕ್ಕೆ ನಿಮಿಷಗಳು ಬಾಕಿ ಇದ್ದಾಗ ಸಿಐಎಲ್‌ 2–1ರಿಂದ ಮುನ್ನಡೆ ಸಾಧಿಸಿತ್ತು.

ಈ ಸಂದರ್ಭದಲ್ಲಿ ಜವಾಹರ್‌ ತಂಡ ಗೋಲು ಗಳಿಸಿತು. ಇದನ್ನು ‘ಆಫ್‌ಸೈಡ್‌’ ಎಂದು ಘೋಷಿಸುವಂತೆ ಸಿಐಎಲ್‌ ಆಟಗಾರರು ರೆಫರಿಯನ್ನು ಕೋರಿದರು. ಸಹಾಯಕ ರೆಫರಿ ಇದಕ್ಕೆ ಒಪ್ಪದಿದ್ದಾಗ ಅವರನ್ನು ಆಟಗಾರರು ತಳ್ಳಿದರು. ಆಟ ಮುಂದುವರಿಸಲು ಇಷ್ಟವಿಲ್ಲ ಎಂದೂ ಹೇಳಿದರು.

ಇದೇ ಕ್ರೀಡಾಂಗಣದಲ್ಲಿ ನಡೆದ ’ಎ’ ಡಿವಿಷನ್ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ ತಂಡ 3–1ರಿಂದ ಪರಿಕ್ರಮ ಎಫ್‌ಸಿಯನ್ನು ಮಣಿಸಿತು. ಚಾಲೆಂಜರ್ಸ್‌ಗೆ ವಿಷ್ಣು (30ನೇ ನಿಮಿಷ), ನದೀಮ್‌ (40ನೇ ನಿ) ಮತ್ತು ಪ್ರವೀಣ್‌ (50ನೇ ನಿ) ಗೋಲು ಗಳಿಸಿಕೊಟ್ಟರೆ, ಪರಿಕ್ರಮಕ್ಕಾಗಿ ಚಿರಂಜೀವಿ (16ನೇ ನಿ) ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !