ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಮೂರು ದಿನಗಳ ಹಿಂದೆ ಐಎಸ್ಎಲ್ ಪ್ಲೇ ಆಫ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ಸಿ ತಂಡವನ್ನು ನಿರೀಕ್ಷೆಗಿಂತ ಸುಲಭವಾಗಿ 5–0 ಗೋಲುಗಳಿಂದ ಸೋಲಿಸಿದ್ದ ಬೆಂಗಳೂರು ಎಫ್ಸಿ ಅಭಿಮಾನಿ ಬಳಗದಲ್ಲಿ ರೋಮಾಂಚನ ಮೂಡಿಸಿತ್ತು. ಉತ್ಸಾಹದಲ್ಲಿರುವ ಈ ತಂಡ ಈಗ ಮತ್ತೊಂದು ಪರೀಕ್ಷೆಗೆ ಸಜ್ಜಾಗಿದೆ.

ಬುಧವಾರ ‘ಬ್ಲೂಸ್ ತಂಡ’ ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ನ ಮೊದಲ ಲೆಗ್ ಪಂದ್ಯದಲ್ಲಿ ಎಫ್ಸಿ ಗೋವಾ ತಂಡವನ್ನು ಎದುರಿಸಲಿದೆ. ಗೋವಾ ತಂಡ 24 ಪಂದ್ಯಗಳಿಂದ 48 ಪಾಯಿಂಟ್ಸ್ ಕಲೆಹಾಕಿ ಲೀಗ್ನಲ್ಲಿ ಎರಡನೇ ಸ್ಥಾನದೊಡನೆ ನೇರವಾಗಿ ಸೆಮಿಫೈನಲ್ಗೆ ಟಿಕೆಟ್ ಕಾದಿರಿಸಿತ್ತು.

ಗಮನಾರ್ಹ ಎಂದರೆ ಮನೊಲೊ ಮಾರ್ಕ್ವೆಝ್ ಅವರು ಎಫ್ಸಿ ಗೋವಾ ತಂಡದ ತರಬೇತಿ ಹೊಣೆ ಹೊತ್ತ ಮೇಲೆ ಬಿಎಫ್ಸಿ ತಂಡಕ್ಕೆ ಆ ತಂಡದ ಮೇಲೆ ಜಯಗಳಿಸಲು ಸಾಧ್ಯವಾಗಿಲ್ಲ.

ಅದರೆ ಬಿಎಫ್ಸಿ ಹೆಡ್ ಕೋಚ್ ಜೆರಾರ್ಡ್ ಜಾರ್ಗೋಝಾ ಎದುರಾಳಿ ತಂಡದ ಲಯ ಕಳವಳಕ್ಕೆ ಕಾರಣವಾಬಹುದು ಎಂಬ ಅಂಶವನ್ನು ಒಪ್ಪಲು ತಯಾರಿಲ್ಲ. ‘ನಾವು ಪ್ರಬಲ ತಂಡವನ್ನು ಎದುರಿಸುತ್ತಿದ್ದೇವೆ. ಆ ತಂಡದ ಬಗ್ಗೆ ನಮಗೆ ಗೌರವವೂ ಇದೆ. ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಈ ಋತುವಿನಲ್ಲಿ ಆ ತಂಡದ ಎದುರು ನಾವು ಜಯಗಳಿಸಲಾಗಿಲ್ಲ. ಆದರೆ ನಮ್ಮ ತಂಡದ ಆಟಗಾರರು ಪ್ಲೇ ಆಫ್ ಮೂಡ್ನಲ್ಲಿದ್ದಾರೆ’ ಎಂದು ಅವರು ಹೇಳಿದರು.

‘ಇದು ಎರಡು ಪ್ರಬಲ ತಂಡಗಳ ನಡುವಣ ಪಂದ್ಯ. ಸೆಮಿಫೈನಲ್ ಸೆಣಸಾಟ. ಈ ಹಿಂದಿನ ಪಂದ್ಯಗಳ ಜೊತೆ ಈ ಪಂದ್ಯವನ್ನು ಹೋಲಿಸಲಾಗದು. ನಾನು ತಂಡಕ್ಕೆ ಟ್ರೋಫಿಗಳನ್ನು ಗೆಲ್ಲಿಸಿಕೊಡಲು ಬಂದಿದ್ದೇನೆ’ ಎಂದು ಅವರು ವಿಶ್ವಾಸದ ಮಾತುಗಳನ್ನಾಡಿದರು.

ಎರಡೂ ತಂಡಗಳು ಈ ಋತುವಿನಲ್ಲಿ ತಮ್ಮ ವರ್ಚಸ್ಸಿಗೆ ತಕ್ಕಂತೆ ಆಡಿವೆ. ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿವೆ. ತಂಡಗಳ ರಕ್ಷಣೆ ಬಲವಾಗಿದೆ. ಹಿನ್ನಡೆಯಲ್ಲಿದ್ದಾಗ ಪುಟಿದೇಳುವ ಗುಣಗಳನ್ನು ತೋರಿವೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.