ಶನಿವಾರ, ಡಿಸೆಂಬರ್ 7, 2019
21 °C

ಐಎಸ್‌ಎಲ್‌ಗೆ ಬಿಎಫ್‌ಸಿ ಅಭ್ಯಾಸ ಆರಂಭ

Published:
Updated:
Prajavani

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿಯ ಚಾಂಪಿಯನ್‌ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) 2019–20ರ ಆವೃತ್ತಿಗೆ ಶುಕ್ರವಾರ ಅಭ್ಯಾಸ ಆರಂಭಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸವನ್ನು 150ಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದರು.

ತಂಡದೊಂದಿಗೆ ಈ ಬಾರಿ ಒಪ್ಪಂದ ಮಾಡಿಕೊಂಡಿರುವ ಆಶಿಕ್ ಕುರುಣಿಯನ್‌, ರಾಫೆಲ್ ಆಗಸ್ಟೊ, ಮ್ಯಾನ್ಯುಯೆಲ್ ಒನು ಮತ್ತು ಸುರೇಶ್ ವಾಂಗ್‌ಜಂ ಪ್ರಮುಖ ಆಕರ್ಷಣೆಯಾಗಿದ್ದರು. ಕೋಚ್ ಚಾರ್ಲ್ಸ್‌ ಕ್ವದ್ರತ್ ಇದ್ದರು.  

‘ಕಳೆದ ಬಾರಿಯ ತಂತ್ರಗಳನ್ನೇ ಈ ಬಾರಿಯೂ ಬಳಸಿಕೊಳ್ಳಲಾಗುವುದು. ಹಂತ ಹಂತವಾಗಿ ಪಂದ್ಯಗಳನ್ನು ಗೆಲ್ಲುವುದು ತಂಡದ ಗುರಿ’ ಎಂದು ಕ್ವದ್ರತ್ ಹೇಳಿದರು.

ಜ್ವರದಿಂದ ಚೇತರಿಸಿಕೊಂಡಿರುವ ನಾಯಕ ಸುನಿಲ್ ಚೆಟ್ರಿ ಕಣಕ್ಕೆ ಇಳಿದಿರಲಿಲ್ಲ. ಅಭ್ಯಾಸದ ನಂತರ ಮಾತನಾಡಿದ ಅವರು ‘ದೌರ್ಬಲ್ಯಗಳನ್ನು ಅರಿತು ತಿದ್ದಿಕೊಳ್ಳಲು ತಂಡ ಮುಂದಾಗಿದೆ. ಆದ್ದರಿಂದ ಈ ಬಾರಿ ಎಲ್ಲ ಎದುರಾಳಿ ತಂಡಗಳಿಗೂ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂಬ ಭರವಸೆ ಇದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)