ಮಂಗಳವಾರ, ಸೆಪ್ಟೆಂಬರ್ 21, 2021
24 °C

ಎಎಫ್‌ಸಿ ಕಪ್‌: ಆಗಸ್ಟ್ 15ರಂದು ಬಿಎಫ್‌ಸಿ ಪಂದ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಫ್ರಾಂಚೈಸ್ ಬೆಂಗಳೂರು ಎಫ್‌ಸಿ ತಂಡವು ಎಎಫ್‌ಸಿ ಕಪ್ ಪ್ಲೇ ಆಫ್ ಪಂದ್ಯವನ್ನು ಆಗಸ್ಟ್ 15ರಂದು ಈಗಲ್ಸ್ ಎಫ್‌ಸಿ ಎದುರು ಆಡಲಿದೆ. ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಸೋಮವಾರ ಈ ವಿಷಯ ತಿಳಿಸಿದೆ.

ಮಾಲ್ಡಿವ್ಸ್‌ನಲ್ಲಿ ನಿಗದಿಯಾಗಿರುವ ಟೂರ್ನಿಯ ಎರಡನೇ ಲೆಗ್‌ನ ಗುಂಪು ಹಂತದ ಪಂದ್ಯಗಳನ್ನು ಎಎಫ್‌ಸಿ ಖಚಿತಪಡಿಸಿದೆ.

2016ರ ಎಎಫ್‌ಸಿ ಕಪ್ ರನ್ನರ್ಸ್ಅಪ್ ಆಗಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ), ಮಾಲ್ಡಿವ್ಸ್‌ನ ಈಗಲ್ಸ್ ಎಫ್‌ಸಿ ಎದುರು ಸೆಣಸಲಿದೆ. ಈ ಹಣಾಹಣಿಯಲ್ಲಿ ವಿಜೇತ ತಂಡವು ‘ಡಿ’ ಗುಂಪಿನಲ್ಲಿರುವ ಭಾರತದ ಎಟಿಕೆ ಮೋಹನ್ ಬಾಗನ್‌ ಎಫ್‌ಸಿ, ಮಾಲ್ಡಿವ್ಸ್‌ನ ಮಜಿಯಾ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್‌ ತಂಡ ಮತ್ತು ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ತಂಡಗಳನ್ನು ಸೇರಿಕೊಳ್ಳಲಿದೆ.

‘ಡಿ’ ಗುಂಪಿನ ಪಂದ್ಯಗಳು ಆಗಸ್ಟ್‌ 18, 21 ಮತ್ತು 24ರಂದು ನಡೆಯಲಿದ್ದು, ಇಲ್ಲಿ ಅಗ್ರಸ್ಥಾನ ಗಳಿಸುವ ತಂಡಗಳು ಸಿಂಗಲ್‌ ಲೆಗ್‌ ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

ತಂಡದ ಮೂವರು ಆಟಗಾರರು ಕೋವಿಡ್ ತಡೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮೇನಲ್ಲಿ ಬಿಎಫ್‌ಸಿ ಆಡಬೇಕಿದ್ದ ಈಗಲ್ಸ್ ಎಫ್‌ಸಿ ಎದುರಿನ ಪಂದ್ಯವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಪ್ಲೇ ಆಫ್ ಪಂದ್ಯಕ್ಕಾಗಿ ಬಿಎಫ್‌ಸಿ ಈಗಾಗಲೇ ಅಭ್ಯಾಸ ಆರಂಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು