ಸಾವೊ ಪಾಲೊ, ಬ್ರೆಜಿಲ್: ಬ್ರೆಜಿಲ್ನಲ್ಲಿ ಕೋವಿಡ್–19 ಪಿಡುಗಿನಿಂದ ಸಾವಿನ ಸಂಖ್ಯೆ 1 ಲಕ್ಷಕ್ಕೆ ಸಮೀಪಿಸಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರದ ಪ್ರಮುಖ ಫುಟ್ಬಾಲ್ ಚಾಂಪಿಯನ್ಷಿಪ್ ಸೀರಿ ‘ಎ’ ಶನಿವಾರ ಪುನರಾರಂಭಗೊಳ್ಳುತ್ತಿದೆ. ದೇಶದಲ್ಲಿ ಮೂರು ತಿಂಗಳುಗಳ ಕಾಲ ಫುಟ್ಬಾಲ್ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಸೀರಿ ‘ಎ’ ಟೂರ್ನಿಯ ಮೂರು ಪಂದ್ಯಗಳು ಶನಿವಾರ ನಡೆಯಲಿವೆ. ಕೋವಿಡ್ ಭಯ ಕಡಿಮೆಯಾಗಿ ಜನಜೀವನ ಹಾಗೂ ಕ್ರೀಡೆ ಸಹಜಸ್ಥಿತಿಗೆ ಮರಳಬೇಕು ಎಂದು ಆಶಿಸುತ್ತಿದ್ದ ರಾಷ್ಟ್ರದ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರು ಒಂದು ಹಂತದಲ್ಲಿ ಯಶಸ್ಸು ಸಾಧಿಸಿದಂತಾಗಿದೆ.

ಬ್ರೆಜಿಲ್ನಲ್ಲಿಎರಡು ತಿಂಗಳಿಗೂ ಹೆಚ್ಚು ಕಾಲ ಪ್ರತಿದಿನದ ಸಾವಿನ ಸರಾಸರಿ 1000 ಇತ್ತು. ಅಂದಾಜು 30 ಲಕ್ಷ ಮಂದಿಗೆ ಸೋಂಕು ತಗುಲಿದೆ. ಅದಾಗ್ಯೂ ಚಾಂಪಿಯನ್ಷಿಪ್ಅನ್ನು ನಡೆಸುವ ವಿಶ್ವಾಸವನ್ನು ರಾಷ್ಟ್ರೀಯ ಫುಟ್ಬಾಲ್ ಮಂಡಳಿ ವ್ಯಕ್ತಪಡಿಸಿದೆ.

ಬ್ರೆಜಿಲ್ ಸರ್ಕಾರದ ಕೋವಿಡ್ ತಡೆ ಮಾರ್ಗಸೂಚಿಗಳ ಅನ್ವಯ 300ಕ್ಕಿಂತ ಹೆಚ್ಚು ಜನ (ಆಟಗಾರರು, ಕ್ಲಬ್ ಸಿಬ್ಬಂದಿ, ಅಧಿಕಾರಿಗಳು ಹಾಗೂ ಮಾಧ್ಯಮದವರು ಸೇರಿ) ಪಂದ್ಯಗಳಿಗೆ ಹಾಜರಾಗುವಂತಿಲ್ಲ. ಆರು ಮಂದಿ ಬಾಲ್ಬಾಯ್ಗಳಿಗೆ ಮಾತ್ರ ಅವಕಾಶವಿದೆ.

ಫುಟ್ಬಾಲ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅಧ್ಯಕ್ಷ ಬೊಲ್ಸೊನಾರೊ, ಬ್ರೆಜಿಲ್ನಲ್ಲಿ ಟೂರ್ನಿಗಳು ಆರಂಭವಾಗುತ್ತಿರುವುದನ್ನು ಗುರುವಾರ ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.