ಭಾನುವಾರ, ಜೂನ್ 20, 2021
24 °C

ಎಫ್‌ಸಿ ಬೆಂಗಳೂರು ಯುನೈಟೆಡ್‌: ಕೆನೆತ್ ರಾಜ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಡಿಎಫ್ಎ ಸೂಪರ್‌ ಡಿವಿಷನ್ ಲೀಗ್ ಫುಟ್‌ಬಾಲ್ ಟೂರ್ನಿ ವಿಜೇತ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಸಿ.ಕೆನೆತ್ ರಾಜ್ ಅವರನ್ನು ಯುನೈಟೆಡ್ ಪ್ರೊ ಸ್ಕೂಲ್ ಆ್ಯಂಡ್ ಅಕಾಡೆಮಿಯ ತಾಂತ್ರಿಕ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಫುಟ್‌ಬಾಲ್ ತರಬೇತಿಯಲ್ಲಿ 19 ವರ್ಷಗಳ ಅನುಭವ ಹೊಂದಿರುವ ಕೆನೆತ್‌, ಭಾರತದ ಯುವ ತರಬೇತುದಾರರಲ್ಲಿ ಒಬ್ಬರು. ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್‌ನ (ಎಎಫ್‌ಸಿ) ‘ಎ‘ ಲೈಸೆನ್ಸ್ ಹೊಂದಿರುವ ಅವರು, ಫಿಫಾದ ಯುವ ತರಬೇತಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

2012–2014ರ ಅವಧಿಯಲ್ಲಿ ಅವರು ಭಾರತದ 16 ವರ್ಷದೊಳಗಿನ ಮತ್ತು 15 ವರ್ಷದೊಳಗಿನವರ ತಂಡಗಳಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ 16 ವರ್ಷದೊಳಗಿನವರ ತಂಡವು 2013ರಲ್ಲಿ ನೇಪಾಳದಲ್ಲಿ ನಡೆದ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು