ಶುಕ್ರವಾರ, ಆಗಸ್ಟ್ 19, 2022
25 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ

ಇಂಡಿಯನ್ ಸೂಪರ್ ಲೀಗ್: ಆತಿಥೇಯ ಗೋವಾಕ್ಕೆ ಚೆನ್ನೈಯಿನ್‌ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫಟೋರ್ಡಾ, ಗೋವಾ: ಎರಡನೇ ಜಯದ ನಿರೀಕ್ಷೆಯಲ್ಲಿರುವ ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಜಮ್ಶೆಡ್‌ಪುರ ಎಫ್‌ಸಿ ವಿರುದ್ಧ 2–1ರಿಂದ ಗೆದ್ದಿದ್ದ ಚೆನ್ನೈಯಿನ್ ತಂಡವು ಬಳಿಕ ತಲಾ ಎರಡು ಪಂದ್ಯಗಳಲ್ಲಿ ಡ್ರಾ ಹಾಗೂ ಸೋಲು ಕಂಡಿತ್ತು. ಸದ್ಯ ಆ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಐದು ಪಾಯಿಂಟ್ಸ್ ಕಲೆಹಾಕಿದೆ. ಆತಿಥೇಯ ಗೋವಾ ತಂಡವು ಎಂಟು ಪಾಯಿಂಟ್‌ ಗಳಿಸಿ ಆರನೇ ಸ್ಥಾನದಲ್ಲಿದೆ.

ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಡಿಫೆನ್ಸ್ ಆಟಗಾರ ಎನೆಸ್ ಸಿಪೊವಿಚ್‌ ಅವರು  ಮರಳಿರುವುದು ಚೆನ್ನೈಯಿನ್ ತಂಡದ ಬಲ ಹೆಚ್ಚಿಸಿದೆ. ಬೊಸ್ನಿಯಾದ ಎನೆಸ್ ಜೊತೆಗೆ ಬ್ರೆಜಿಲ್ ಆಟಗಾರ ಎಲಿ ಸಬಿಯಾ ಅವರು, ಗೋವಾ ತಂಡದ ಇಗೊರ್ ಅಂಗುಲೊ ದಾಳಿಗೆ ಸವಾಲಾಗಬಲ್ಲರು. ಅಂಗುಲೊ ಇದುವರೆಗೆ ಟೂರ್ನಿಯಲ್ಲಿ ಆರು ಗೋಲು ದಾಖಲಿಸಿದ್ದಾರೆ.

ಗೋವಾ ತಂಡದ ಡಿಫೆಂಡಿಂಗ್ ವಿಭಾಗದಿಂದ ಇನ್ನಷ್ಟು ಉತ್ತಮ ಆಟ, ಅದರಲ್ಲೂ ವಿಶೇಷವಾಗಿ ಸೆಟ್ ಪೀಸ್‌ ಹಂತದಲ್ಲಿ ಹೊರಹೊಮ್ಮಬೇಕಿದೆ. ಆರು ಪಂದ್ಯಗಳಲ್ಲಿ ಆ ತಂಡ ಆರು ಗೋಲುಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿದೆ. ಇದರಲ್ಲಿ ಐದು ಗೋಲುಗಳು ಸೆಟ್ ಪೀಸ್‌ ಮೂಲಕ ಬಂದಿವೆ.

ಎರಡೂ ತಂಡಗಳು ಬಲಿಷ್ಠವಾಗಿರುವುದರಿಂದ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು