ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕಪ್‌ ಫುಟ್‌ಬಾಲ್‌: ಚೆಟ್ರಿ ಮಿಂಚು, ಭಾರತಕ್ಕೆ ಜಯ

Last Updated 8 ಜೂನ್ 2022, 19:32 IST
ಅಕ್ಷರ ಗಾತ್ರ

ಕೋಲ್ಕತ್ತ: ನಾಯಕ ಸುನಿಲ್‌ ಚೆಟ್ರಿ ತಂದಿತ್ತ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ ಕಾಂಬೊಡಿಯಾ ವಿರುದ್ಧ ಜಯ ಸಾಧಿಸಿತು.

ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 2–0 ರಲ್ಲಿ ಗೆದ್ದಿತು. ಚೆಟ್ರಿ ಅವರು 13 ಹಾಗೂ 59ನೇ ನಿಮಿಷಗಳಲ್ಲಿ ಗೋಲು ತಂದಿತ್ತರು.

127ನೇ ಪಂದ್ಯ ಆಡಿದ ಚೆಟ್ರಿ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಗೋಲುಗಳ ಸಂಖ್ಯೆಯನ್ನು 82ಕ್ಕೆ ಹೆಚ್ಚಿಸಿಕೊಂಡರು. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117 ಗೋಲು) ಮತ್ತು ಅರ್ಜೆಂಟೀನದ ಲಯೊನೆಲ್‌ ಮೆಸ್ಸಿ (86) ಬಳಿಕ ಮೂರನೇ ಸ್ಥಾನದಲ್ಲಿ ಚೆಟ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT