ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌ ಟೂರ್ನಿ: ರಾಜಾಜಿನಗರ, ಸರ್ವಜ್ಞನಗರ ತಂಡಗಳಿಗೆ ಜಯ

Published 5 ಜುಲೈ 2024, 14:35 IST
Last Updated 5 ಜುಲೈ 2024, 14:35 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ರಾಜಾಜಿನಗರ ಕ್ಷೇತ್ರ ತಂಡವು ಇಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಸಿ’ ಗುಂಪಿನ ಪಂದ್ಯದಲ್ಲಿ 9–0 ಗೋಲುಗಳ ಅಂತರದಿಂದ ಗೋವಿಂದರಾಜ ನಗರ ಕ್ಷೇತ್ರ ತಂಡವನ್ನು ಮಣಿಸಿತು.

ರಾಜಾಜಿನಗರ ತಂಡದ ಪರ ಡಿ.ಧನುಷ್‌ (2 ಮತ್ತು 50ನೇ ನಿಮಿಷ), ಮೋನಿಷ್‌ಕುಮಾರ್‌ (4 ಮತ್ತು 16ನೇ ನಿ), ಕವಿಯರಾಸನ್‌ (7, 44 ಮತ್ತು 59ನೇ ನಿ), ರಾಜು.ಡಿ (34ನೇ ನಿ), ಮಾಧವನ್ (60ನೇ ನಿ) ಗೋಲು ಬಾರಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ತಂಡವು 10–1 ಗೋಲುಗಳ ಅಂತರದಿಂದ ವಿಜಯನಗರ ವಿಧಾನಸಭಾ ಕ್ಷೇತ್ರ ತಂಡವನ್ನು ಪರಾಭವಗೊಳಿಸಿತು.

ಸರ್ವಜ್ಞ ನಗರ ತಂಡದ ಪರ ಸುನೀಲ್‌ಕುಮಾರ್‌ (7 ಮತ್ತು 27ನೇ ನಿಮಿಷ), ವಿ.ಸುರೇಂದ್ರ ಪ್ರಸಾದ್‌ (17, 25 ಮತ್ತು 37ನೇ ನಿ), ಜಯವಂದನ್‌ (34ನೇ ನಿ), ಯೋಗಿತ್‌.ಎನ್‌ (39 ಮತ್ತು 65ನೇ ನಿ), ಯೆಶ್ವಂತ್‌.ಜೆ (63 ಮತ್ತು 67ನೇ ನಿ) ಗೋಲು ಗಳಿಸಿದರು.

ವಿಜಯನಗರ ತಂಡದ ಪರವಾಗಿ ಆರ್ಯನ್‌ ಎಂ.ವಿ (12ನೇ ನಿಮಿಷ) ಏಕೈಕ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT