ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಬಾಲ್ ಪಂದ್ಯದಲ್ಲಿ ಎರಿಕ್ಸನ್ ಕುಸಿದು ಬಿದ್ದಿದ್ದಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ

ಹೃದಯ ಸ್ತಂಭನದಿಂದ ಬಳಲುತ್ತಿದ್ದರು
Last Updated 14 ಜೂನ್ 2021, 6:26 IST
ಅಕ್ಷರ ಗಾತ್ರ

ಕೂಪನ್‌ಹೇಗನ್: ಯುರೋ ಕಪ್ 2020 ಪುಟ್ಬಾಲ್ ಪಂದ್ಯದ ವೇಳೆ ಕುಸಿದು ಬಿದ್ದಿದ್ದ ಡೆನ್ಮಾರ್ಕ್‌ ತಂಡದ ಮಿಡ್‌ಫಿಲ್ಡರ್ ಕ್ರಿಸ್ಟಿಯನ್ ಎರಿಕ್ಸನ್ ಹೃದಯ ಸ್ತಂಭನದಿಂದ ಬಳಲುತ್ತಿದ್ದರು ಎಂದು ತಂಡದ ವೈದ್ಯ ಮಾರ್ಟನ್ ಬೊಸೆನ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಿಕ್ಸನ್ಹೃದಯ ಸ್ತಂಭನದಿಂದ ತೀವ್ರ ಕುಸಿದು ಹೋಗಿದ್ದರು. ಸದ್ಯ ಅವರನ್ನು ಸರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

‘ಆದರೆ, 29 ವರ್ಷದ ಕ್ರೀಡಾಪಟು ಎರಿಕ್ಸನ್ ಹೃದಯ ಸ್ತಂಭನಕ್ಕೆ ಏಕೆ ಒಳಗಾದರು? ಎಂಬುದು ಇನ್ನು ತಿಳಿದು ಬಂದಿಲ್ಲ. ಸದ್ಯ ಅವರು ತಮಗಾದ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಶೀಘ್ರವೇ ಮರಳಿ ಬರಲಿದ್ದಾರೆ‘ ಎಂದು ಬೊಸೆನ್ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ನಡೆದ ಯುರೋ ಕಪ್ 2020 ಫಿನ್‌ಲೆಂಡ್‌ ಎದುರಿನ ‘ಬಿ‘ ಗುಂಪಿನ ಪಂದ್ಯದಲ್ಲಿ ಕ್ರಿಸ್ಟಿಯನ್ ಎರಿಕ್ಸನ್‌ ಏಕಾಏಕಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದರು. ಪಂದ್ಯದ ಮೊದಲಾರ್ಧದ ಅಂತ್ಯದ ವೇಳೆ ಈ ಘಟನೆ ನಡೆಯಿತು. ತಕ್ಷಣ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ವೈದ್ಯಕೀಯ ತುರ್ತಿನ ಕಾರಣ ಆ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಯೂರೋಪಿಯನ್‌ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT