ಭಾನುವಾರ, ಜನವರಿ 26, 2020
31 °C

ಎಚ್‌ಎಎಲ್‌ ಕ್ಲಬ್‌ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಎಚ್‌ಎಎಲ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡದವರು ಮಂಡ್ಯ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ‘ಮುಖ್ಯಮಂತ್ರಿ ಕಪ್‌’ ಅಖಿಲ ಭಾರತ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್‌ ತಂಡ 1–0 ಗೋಲಿನಿಂದ ಸಿಕಂದರಾಬಾದ್‌ನ ಡೆಕ್ಕನ್‌ ಡೈನಾಮೋಸ್ ತಂಡವನ್ನು ಮಣಿಸಿತು. ಸಾಗರ್‌ ಅವರು 81ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು.

ಎಫ್‌ಸಿ ಮಂಗಳೂರು ಮತ್ತು ಬೆಂಗಳೂರು ಇಂಡಿಪೆಂಡೆನ್ಸ್‌ ತಂಡಗಳ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕೆಎಸ್‌ಇಬಿ ತಿರುವನಂತಪುರ ಮತ್ತು ಎಎಸ್‌ಎ ಅನಂತಪುರ ತಂಡಗಳು ಎದುರಾಗಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು