ಗುರುವಾರ , ಏಪ್ರಿಲ್ 9, 2020
19 °C

ಫುಟ್‌ಬಾಲ್‌ ಆಟಗಾರನಿಗೆ ತಗುಲಿದ ಕೋವಿಡ್‌ ಸೋಂಕು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕೋಪನ್‌ಹೇಗನ್‌: ಡೆನ್ಮಾರ್ಕ್‌ನ ಹಿರಿಯ ಫುಟ್‌ಬಾಲ್‌ ಆಟಗಾರ ಥಾಮಸ್‌ ಕಹ್ಲೆನ್‌ಬರ್ಗ್‌ ಅವರಿಗೆ ಕೋವಿಡ್‌–19 ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

‘36 ವರ್ಷ ವಯಸ್ಸಿನ ಥಾಮಸ್‌, ಇತ್ತೀಚೆಗೆ ಆ್ಯಮ್‌ಸ್ಟರ್‌ಡಾಂ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ. ಅವರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಆಟಗಾರ ಮತ್ತು ಸಹಾಯಕ ಕೋಚ್‌ ಸೇರಿದಂತೆ ಕ್ಲಬ್‌ನ ಇತರ 13 ಮಂದಿಯ ಮೇಲೂ ನಿಗಾ ಇಡಲಾಗಿದೆ’ ಎಂದು ಕೋಪನ್‌ಹೇಗನ್‌ನ ಬ್ರೊಂಡ್‌ಬೀ ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಡ್‌ಫೀಲ್ಡ್‌ ವಿಭಾಗದ ಆಟಗಾರ ಥಾಮಸ್‌, 2003ರಿಂದ 2014ರ ಅವಧಿಯಲ್ಲಿ ಡೆನ್ಮಾರ್ಕ್‌ ಪರ 47 ಪಂದ್ಯಗಳನ್ನು ಆಡಿ, ಐದು ಗೋಲುಗಳನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು