ಮಡಗಾಂವ್: ಹಾಲಿ ಚಾಂಪಿಯನ್ ಸ್ಪೇನ್ ಮತ್ತು ಕೊಲಂಬಿಯಾ ತಂಡಗಳು ಫಿಫಾ 17 ವರ್ಷ ವಯಸ್ಸಿನೊಳಗಿನ ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ.

ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್ನಲ್ಲಿ ಸ್ಪೇನ್ ಏಕೈಕ ಗೋಲಿನಿಂದ ಜರ್ಮನಿ ತಂಡವನ್ನು ಮಣಿಸಿತು. ಲೂಸಿಯಾ ಸೊರಾಲೆಸ್ ಅವರು 90ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು.

ಮೊದಲ ಸೆಮಿಫೈನಲ್ನಲ್ಲಿ ಕೊಲಂಬಿಯಾ ತಂಡ ಪೆನಾಲ್ಟಿ ಶೂಟೌಟ್ನಲ್ಲಿ 6–5 ರಲ್ಲಿ ನೈಜೀರಿಯಾ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು.

17 ವರ್ಷ ವಯಸ್ಸಿನೊಳಗಿನವರ ಮಹಿಳಾ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ ದಕ್ಷಿಣ ಅಮೆರಿಕದ ಮೊದಲ ತಂಡ ಎಂಬ ಗೌರವ ಕೊಲಂಬಿಯಾ ತನ್ನದಾಗಿಸಿಕೊಂಡಿತು.

ಭಾನುವಾರ ಫೈನಲ್: ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಅ.30 ರಂದು ರಾತ್ರಿ 9ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಮೂರನೇ ಸ್ಥಾನಯನ್ನು ನಿರ್ಣಯಿಸಲು ಅದೇ ಕ್ರೀಡಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ನೈಜೀರಿಯಾ ಮತ್ತು ಜರ್ಮನಿ ತಂಡಗಳು ಎದುರಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.