ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಯುನೈಟೆಡ್ ಜಯಭೇರಿ

Last Updated 22 ಜನವರಿ 2021, 18:48 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಆಟವಾಡಿದ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಬಿಡಿಎಫ್‌ಎ ಸೂಪರ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಶುಕ್ರವಾರ 4–0ಯಿಂದ ಎಡಿಇ ಎಫ್‌ಸಿ ಎದುರು ಗೆದ್ದಿತು.

ವಿಜೇತ ತಂಡದ ಪರ ಜೈಸನ್‌ ಜೋರ್ಡಾನ್‌ ವಾಜ್‌ (9ನೇ ನಿಮಿಷ), ಚೇತನ್‌ (30ನೇ ನಿ.), ಮಿಟೇಯ್ ಕೆ.ಎಂ. (72ನೇ ನಿ.) ಹಾಗೂ ರೊನಾಲ್ಡೊ ಆಗಸ್ಟೊ ಅಂಟೋನಿಯೊ ಒಲೆವೆರಾ (79ನೇ ನಿ.) ತಲಾ ಒಂದು ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡವು 3–1ರಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡವನ್ನು ಪರಾಭವಗೊಳಿಸಿತು. ಎಂಇಜಿ ತಂಡದ ಶುಭಂ ರಾಣಾ (35ನೇ ನಿ.) ಅಕ್ಬರ್‌ ಎಸ್‌. (42, 82ನೇ ನಿ.) ಕಾಲ್ಚಳಕ ತೋರಿದರು.

ಡ್ರೀಮ್‌ ಯುನೈಟೆಡ್ ತಂಡದ ಪರ ಅವಿಷೇಕ್ ಸಿಂಗ್‌ 77ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT