ಶನಿವಾರ, ಏಪ್ರಿಲ್ 4, 2020
19 °C
ಜೆಎಫ್‌ಸಿಗೆ ಸೋಲು

ಐಎಸ್‌ಎಲ್‌ ಫುಟ್‌ಬಾಲ್: ಗುಂಪು ಹಂತಕ್ಕೆ ಗೋವಾ

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್‌ಶೆಡ್‌ಪುರ: ಎಫ್‌ಸಿ ಗೋವಾ ತಂಡ, ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ ಗ್ರೂಪ್‌ ಹಂತಕ್ಕೆ ಅರ್ಹತೆ ಪಡೆದ ಭಾರತದ ಮೊದಲ ತಂಡ ಎನಿಸಿತು. ಗೋವಾ ತಂಡ ಬುಧವಾರ ನಡೆದ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಜಮ್‌ಶೆಡ್‌ಪುರ ತಂಡವನ್ನು 5–0ರಿಂದ ಸೋಲಿಸಿತು.

ಫೆರಾನ್‌ ಕೊರೊಮಿನಾಸ್‌ (11ನೇ ನಿಮಿಷ), ಹ್ಯೂಗೊ ಬೌಮಾಸ್‌ (70, 90ನೇ ನಿ), ಜಾಕಿಚಂದ್‌ ಸಿಂಗ್‌ (84ನೇ ನಿ), ಮೊರ್ತಾಡಾ ಫಾಲ್‌ (87ನೇ ನಿ) ಗೋವಾ ಪರ ಗೋಲು ಹೊಡೆದರು. ಐಎಸ್‌ಎಲ್‌ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡ 2021ರ ಎಎಫ್‌ಸಿ ಕಪ್‌ಗೆ ಟಿಕೆಟ್‌ ಖಚಿತ ಮಾಡಿಕೊಳ್ಳುತ್ತದೆ.

33 ಪಾಯಿಂಟ್ಸ್‌ ಹೊಂದಿರುವ ಎಟಿಕೆಗೆ ಇನ್ನು ಒಂದು ಪಂದ್ಯ ಮಾತ್ರ ಉಳಿದಿದ್ದು ಗೋವಾದ ಅಗ್ರಸ್ಥಾನ ಅಬಾಧಿತವಾಗಲಿದೆ. ಈ ಹಿಂದೆ ಮೋಹನ್‌ ಬಾಗನ್‌, ಈಸ್ಟ್‌ ಬೆಂಗಾಲ್‌ ತಂಡಗಳು ಏಷ್ಯನ್‌ ಕ್ಲಬ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದವು. ಆದರೆ ದೇಶದ ಯಾವುದೇ ತಂಡ, 2002ರಲ್ಲಿ ಶುರುವಾದ ಎಎಫ್‌ಸಿ ಚಾಂಪಿಯನ್ಸ್‌ ಲೀಗ್ ಗ್ರೂಪ್‌ ಹಂತಕ್ಕೆ ತೇರ್ಗಡೆ ಆಗಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು