ಗುರುವಾರ , ಮೇ 26, 2022
30 °C

ಪ್ಲೇ ಆಫ್‌ ಮೇಲೆ ಎಫ್‌ಸಿ ಗೋವಾ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್‌: ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವ ತನ್ನ ಅವಕಾಶಗಳನ್ನು ಇನಷ್ಟು ವೃದ್ಧಿಸಿಕೊಳ್ಳುವ ಹಂಬಲದಲ್ಲಿರುವ ಎಫ್‌ಸಿ ಗೋವಾ ತಂಡವು ಬುಧವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ಈ ಪಂದ್ಯವು ಫಟೋರ್ಡ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆತಿಥೇಯ ಗೋವಾ ಎಫ್‌ಸಿಯನ್ನು ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ಸಂಭಾವ್ಯ ತಂಡವೆಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಆರು ಪಂದ್ಯಗಳಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿರುವ ಆ ತಂಡದ ವಿಶ್ವಾಸ ಸ್ವಲ್ಪ ಕುಸಿದಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಗೋವಾ (24 ಪಾಯಿಂಟ್ಸ್) ಸದ್ಯ ಐದನೇ ಸ್ಥಾನದಲ್ಲಿದೆ. ಒಡಿಶಾ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ ಎಂಟು ಪಂದ್ಯಗಳಲ್ಲಿ ಆ ತಂಡಕ್ಕೆ ಜಯ ಒಲಿದಿಲ್ಲ. ಟೂರ್ನಿಯಲ್ಲಿಯೇ ಗರಿಷ್ಠ 10 ಪಂದ್ಯಗಳಲ್ಲಿ ಅದು ಕೈಚೆಲ್ಲಿದೆ. ಆದರೂ ತಂಡದ ಹಂಗಾಮಿ ಕೋಚ್‌ ಗೆರಾಲ್ಡ್ ಪೇಟನ್ ಅವರು ಗೋವಾ ಎದುರಿನ ಹಣಾಹಣಿಯಲ್ಲಿ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಪಂದ್ಯ ಆರಂಭ: ಸಂಜೆ 7.30
ಸ್ಥಳ: ಫಟೋರ್ಡ ಕ್ರೀಡಾಂಗಣ, ಮಡಗಾಂವ್‌.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು