ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಗೋವಾಗೆ ಜೆಮ್ಶೆಡ್‌ಪುರ ಸವಾಲು

Last Updated 13 ಜನವರಿ 2021, 14:45 IST
ಅಕ್ಷರ ಗಾತ್ರ

ಫತೋರ್ಡ, ಗೋವಾ: ಆತಿಥೇಯ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್) ಫುಟ್‌ಬಾಲ್‌ ಟೂರ್ನಿಯ ಮೊದಲ ಲೆಗ್‌ನಲ್ಲಿ ಮಿಶ್ರ ಫಲ ಕಂಡಿದೆ. ಮೊದಲ 10 ಪಂದ್ಯಗಳ ಮುಕ್ತಾಯದ ವೇಳೆಗೆ ಅದು ನಾಲ್ಕು ಜಯ ಮತ್ತು ತಲಾ ಮೂರು ಸೋಲು–ಡ್ರಾದೊಂದಿಗೆ 15 ‍ಪಾಯಿಂಟ್ ಕಲೆ ಹಾಕಿದೆ. ಪಾಯಿಂಟ್‌‍ ‍‍ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಂಡ ಈಗ ಎರಡನೇ ಲೆಗ್‌ಗೆ ಸಜ್ಜಾಗಿದೆ. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರು ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ ಸೆಣಸಲಿದೆ.

ಅಗ್ರ ಸ್ಥಾನದಲ್ಲಿರುವ ಮುಂಬೈ ಎಫ್‌ಸಿಗಿಂತಲೂ 10 ಪಾಯಿಂಟ್‌ಗಳ ಹಿಂದೆ ಇರುವ ಗೋವಾ ಲೀಗ್ ಹಂತದಲ್ಲಿ ಉಳಿದಿರುವ 10 ಪಂದ್ಯಗಳಲ್ಲಿ ಪೂರ್ಣ ಸಾಮರ್ಥ್ಯ ಬಳಸಿ ಸ್ಥಾನವನ್ನು ಉತ್ತಮ‍ಪಡಿಸಿಕೊಳ್ಳಲು ಪ್ರಯತ್ನಿಸಲಿದೆ. ಕಳೆದ ಆವೃತ್ತಿಯಲ್ಲಿ ಗೋವಾ ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಈ ಬಾರಿ ಉತ್ತಮ ಆಟವಾಡಿದರೂ ನಿರೀ‌ಕ್ಷಿತ ಫಲ ಸಿಗಲಿಲ್ಲ. ಮೊದಲ ಎಂಟು ಪಂದ್ಯಗಳಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡದೇ ಇದ್ದ ಗೋವಾ. ನಂತರ ಕಳೆಗುಂದಿತ್ತು. ಫಾರ್ವರ್ಡ್‌ ವಿಭಾಗದಿಂದಲೂ ನಿರೀಕ್ಷೆಗೆ ತಕ್ಕ ಆಟ ಕಂಡುಬರಲಿಲ್ಲ.

ಜೆಮ್ಶೆಡ್‌ಪುರ ಎಫ್‌ಸಿ ತಂಡ 10 ಪಂದ್ಯಗಳಲ್ಲಿ ಮೂರು ಜಯದೊಂದಿಗೆ 13 ಪಾಯಿಂಟ್ ಗಳಿಸಿದೆ. ಗೋವಾ ಎದುರಿನ ಪಂದ್ಯದಲ್ಲಿ ಯಾವುದೇ ತಪ್ಪು ಎಸಗಬಾರದು ಎಂದು ಕೋಚ್‌ ಒವೆನ್‌ ಕೊಯ್ಲೆ ಎಚ್ಚರಿಕೆ ನೀಡಿದ್ದಾರೆ.

‘ತ‍ಪ್ಪುಗಳನ್ನು ಸರಿಪಡಿಸಿಕೊಂಡು ಸುಧಾರಿಸಿಕೊಳ್ಳುವ ಕಡೆಗೆ ಗಮನ ಕೊಡಬೇಕಾಗಿದೆ. ಇಲ್ಲವಾದರೆ ತಂಡ ಗುರಿಯತ್ತ ಸಾಗುವ ಹಾದಿ ಕಠಿಣವಾಗಲಿದೆ’ ಎಂದು ಗೋವಾ ಕೋಚ್ ಜುವಾನ್‌ ಫೆರಾಂಡೊ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT