ಜಪಾನ್‌ ಮೋಡಿಗೆ ಸಿಲುಕದ ಬೆಲ್ಜಿಯಂ: ಕ್ವಾರ್ಟರ್‌ ಫೈನಲ್‌ ಪ್ರವೇಶ

7

ಜಪಾನ್‌ ಮೋಡಿಗೆ ಸಿಲುಕದ ಬೆಲ್ಜಿಯಂ: ಕ್ವಾರ್ಟರ್‌ ಫೈನಲ್‌ ಪ್ರವೇಶ

Published:
Updated:
ಜಪಾನ್‌ ವಿರುದ್ಧ ಗೆಲುವು ಸಾಧಿಸಿದ ಬೆಲ್ಜಿಯಂ 

ಮಾಸ್ಕೊ: ಪಂದ್ಯದ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಪಾನ್‌ ಎರಡು ಗೋಲುಗಳನ್ನು ತೆಕ್ಕೆಗೆ ಸೇರಿಸಿಕೊಂಡಿತು. ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿ ಪರಿಗಣಿತವಾಗಿರುವ ಬೆಲ್ಜಿಯಂ ಶೂನ್ಯದೊಂದಿಗೆ ಹೋರಾಟ ಮುಂದುವರಿಸಿ ರೋಚಕ ಜಯ ಸಾಧಿಸಿತು. 

ಹಳದಿ ಕಾರ್ಡ್‌ ಆಧಾರದಲ್ಲಿ ಹದಿನಾರರ ಘಟ್ಟ ತಲುಪಿದ ಜಪಾನ್ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಎರಡು ಗೋಲು ಬಾರಿಸಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದರು. ಬಲಿಷ್ಠ ಬೆಲ್ಜಿಯಂ ತಂಡ ಕೊನೆಯವರೆಗೂ ಹೋರಾಟ ಮುಂದುವರಿಸಿ, ಅಧಿಕ ಸಮಯದ ಸದುಪಯೋಗ ಪಡಿಸಿಕೊಂಡು 3–2 ಅಂತರದ ಗೆಲುವು ಸಾಧಿಸಿತು. 

16ರ ಘಟ್ಟದ ಪಂದ್ಯದಲ್ಲಿ ಎರಡು ಗೋಲು ಅಂತರದಲ್ಲಿದ್ದ ತಂಡವೊಂದು ಗೆಲುವು ಸಾಧಿಸುವ ಮೂಲಕ ಬೆಲ್ಜಿಯಂ ದಾಖಲೆ ಸೃಷ್ಟಿಸಿತು. 1970ರಲ್ಲಿ ಪಶ್ಚಿಮ ಜರ್ಮನಿ ಇಂಥದ್ದೇ ಸಾಧನೆ ಮಾಡಿತ್ತು. 

ಬೆಲ್ಜಿಯಂ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರೆಜಿಲ್‌ನೊಂದಿಗೆ ಸೆಣಸಲಿದೆ. 

ಜಪಾನ್ ಪರ 48ನೇ ನಿಮಿಷದಲ್ಲಿ ಹರಗುಚಿ ಮತ್ತು ಇನೂಯಿ 52ನೇ ನಿಮಿಷದಲ್ಲಿ ಗೋಲು ಗಳಿಸಿದರು. ಬೆಲ್ಜಿಯಂ ಪರವಾಗಿ ವರ್ಟಾಂಗ್ಹೆನ್‌ 69ನೇ ನಿಮಿಷ, ಫೆಲ್ಲಾಯಿನಿ 74ನೇ ನಿಮಿಷ ಹಾಗೂ ಚಾಡ್ಲಿ 90+4ನೇ ನಿಮಿಷದಲ್ಲಿ ವಿಜಯದ ಗೋಲು ಬಾರಿಸಿದರು. 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !