ಗುರುವಾರ , ನವೆಂಬರ್ 21, 2019
26 °C
ಅಗ್ರ ಸ್ಥಾನದಲ್ಲಿ ಬೆಲ್ಜಿಯಂ

ಫಿಫಾ ರ‍್ಯಾಂಕಿಂಗ್‌: 104ನೇ ಸ್ಥಾನದಲ್ಲಿ ಭಾರತ

Published:
Updated:

ಜುರಿಚ್‌: ಇತ್ತೀಚಿನ ದಿನಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತಿರುವ ಭಾರತ ಫುಟ್‌ಬಾಲ್‌ ತಂಡ, ಗುರುವಾರ ಪ್ರಕಟವಾದ ಫಿಫಾ ರ‍್ಯಾಂಕಿಂಗ್‌ನಲ್ಲಿ 104ನೇ ಸ್ಥಾನಕ್ಕೆ ಇಳಿದಿದೆ. 

ಬೆಲ್ಜಿಯಂ ಮೊದಲ ಸ್ಥಾನ ಉಳಿಸಿಕೊಂಡಿದ್ದು, ಬ್ರೆಜಿಲ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿರುವ ಫ್ರಾನ್ಸ್‌ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಭಾರತ ಈ ತಿಂಗಳ ಆರಂಭದಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡು, 2022ರ ವಿಶ್ವ ಕಪ್‌ ಅರ್ಹತಾ ಟೂರ್ನಿಯಲ್ಲಿ ಮೊದಲ ಪಾಯಿಂಟ್‌ ಗಳಿಸಿತ್ತು. ಈ ಡ್ರಾ ಹೊರತಾಗಿಯೂ ಕತಾರ್‌, ರ‍್ಯಾಂಕಿಂಗ್‌ ಪಟ್ಟಿಯಲ್ಲಿ  62ನೇ ಸ್ಥಾನ ಉಳಿಸಿಕೊಂಡಿದೆ. ಅರ್ಹತಾ ಟೂರ್ನಿಯ್ಲಲಿ ಭಾರತ ವಿರುದ್ಧ 2–1 ಜಯಗಳಿಸಿದ್ದ ಒಮಾನ್‌ ತಂಡ ಮೂರು ಸ್ಥಾನ ಬಡ್ತಿ ಪಡೆದಿದ್ದು 84ನೇ ಸ್ಥಾನಕ್ಕೆ ಏರಿದೆ.

ಪ್ರತಿಕ್ರಿಯಿಸಿ (+)