ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ: ಕ್ರೊವೇಶಿಯಾ ವಿರುದ್ಧ ಗೆಲುವು

ಕ್ರೊವೇಶಿಯಾ ವಿರುದ್ಧ 3–0 ಅಂತರದ ಗೆಲುವು ದಾಖಲಿಸಿದ ಮೆಸ್ಸಿ ತಂಡ
Published : 14 ಡಿಸೆಂಬರ್ 2022, 5:13 IST
ಫಾಲೋ ಮಾಡಿ
Comments

ಬೆಂಗಳೂರು: ಕತಾರ್‌ನ ದೋಹಾದಲ್ಲಿ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ತಂಡ ಫಿಫಾ ವಿಶ್ವಕಪ್ 2022ರ ಫೈನಲ್‌ ಪ್ರವೇಶಿಸಿದೆ.

ಕ್ರೊವೇಶಿಯಾ ತಂಡವನ್ನು ಅರ್ಜೆಂಟಿನಾ ತಂಡ 3–0 ಗೋಲುಗಳ ಅಂತರದಿಂದ ಮಣಿಸಿದೆ.

ಬುಧವಾರ ನಡೆಯಲಿರುವ ಫ್ರಾನ್ಸ್ ಮತ್ತು ಮೊರಕ್ಕೊ ನಡುವಣ ಪಂದ್ಯದಲ್ಲಿ ವಿಜೇತರಾಗುವ ತಂಡ ಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ ಸೆಣಸಲಿದೆ.

ಅರ್ಜೆಂಟಿನಾ ತಂಡದ ಆಟಗಾರ ಜೂಲಿಯನ್ ಅಲ್ವಾರೇಜ್ ಎರಡು ಗೋಲು ಬಾರಿಸಿದರೆ, ಮೆಸ್ಸಿ ಒಂದು ಗೋಲು ಬಾರಿಸಿದ್ದಾರೆ.

ಈ ಮೂಲಕ ಅರ್ಜೆಂಟಿನಾ ತಂಡ ಆರನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್‌ಗೆ ಲಗ್ಗೆಇಟ್ಟಿದೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT