ಶುಕ್ರವಾರ, ಡಿಸೆಂಬರ್ 2, 2022
20 °C

FIFA world Cup Football 2022 Qatar: ಸದ್ದು ಮಾಡುತ್ತಿವೆ ಈ ಎರಡು ಹಾಡುಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತಾರ್: ಫಿಪಾ ಫುಟ್‌ಬಾಲ್ ವಿಶ್ವಕಪ್ 2022 ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಇಂದು ಕತಾರ್‌ನ ಆಲ್‌ಬೆತ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ.

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಫುಟ್‌ಬಾಲ್ ವಿಶ್ವಕಪ್ ಉದ್ಘಾಟನೆಯಾಗಲಿದ್ದು, ಜೋರು ಸಿದ್ದತೆ ನಡೆದಿದೆ. ಉದ್ಘಾಟನೆ ಪಂದ್ಯದಲ್ಲಿ ಆಥಿತೇಯ ಕತಾರ್‌ ಈಕ್ವೆಡಾರ್ ಪಂದ್ಯ ನಡೆಯಲಿದೆ.

ಇನ್ನು ಈ ಬಾರಿ ಫುಟ್‌ಬಾಲ್ ಹಾಡುಗಳು ಸದ್ದು ಮಾಡುತ್ತಿದ್ದು, ಕಳೆದ ಮೂರು ತಿಂಗಳ ನಡುವೆ ಎರಡು ಹಾಡುಗಳನ್ನು ಫಿಪಾ ಬಿಡುಗಡೆ ಮಾಡಿದೆ. ಈ ಹಾಡುಗಳು ಯೂಟ್ಯೂಬ್‌ನಲ್ಲಿ ಚಂಚಲನ ಸೃಷ್ಟಿಸಿವೆ..

ಕೆನಡಾ ಮೂಲದ ಬಾಲಿವುಡ್ ನಟಿ ನೂರಾ ಫತೇಹಿ ಕಾಣಿಸಿಕೊಂಡಿರುವ ಲೈಟ್ ದಿ ಸ್ಕೈ ಸೌಂಡ್‌ಟ್ರ್ಯಾಕ್ ಗಮನ ಸೆಳೆಯುತ್ತಿದ್ದು ಹಿಟ್ ಆಗಿದೆ. ಇದೇ ಹಾಡಿಗೆ ಇಂದು ಉದ್ಘಾಟನೆ ಕಾರ್ಯಕ್ರಮದಲ್ಲಿ ಗಾಯಕಿ ಶಕಿರಾ, ನೂರಾ ನೃತ್ಯ ಮಾಡುವ ಸಂಭವವಿದೆ.

 

Arhbo featuring Ozuna & GIMS ಎನ್ನುವ ಇನ್ನೊಂದು ಸೌಂಡ್‌ಟ್ರ್ಯಾಕ್‌ ಈ ಸಾರಿಯ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಸದ್ದು ಮಾಡುತ್ತಿದೆ.

 

ಫುಟ್‌ಬಾಲ್‌ ಪ್ರೇಮಿಗಳ ಮನಸ್ಸು ಇನ್ನೊಂದು ತಿಂಗಳು ಚೆಂಡಿನ ಸುತ್ತಲೇ ಗಿರಕಿ ಹೊಡೆಯಲಿದೆ. ಕತಾರ್‌ನ  ರಾಜಧಾನಿ ದೋಹಾದ ಎಂಟು ಕ್ರೀಡಾಂಗಣಗಳ ಹಸಿರು ಹಾಸಿನಲ್ಲಿ ಮೂಡಿ ಬರಲಿರುವ ಕಾ‌ಲ್ಚೆಂಡಿನಾಟದ ಸೊಬಗು ಸವಿಯಲು ಇಡೀ ಜಗತ್ತು ಕಾತರವಾಗಿದೆ.

ಜಗತ್ತಿನ ಜನಪ್ರಿಯ ಕ್ರೀಡೆಯ ಅತಿದೊಡ್ಡ ಹಬ್ಬದ ಆತಿಥ್ಯಕ್ಕೆ ಅರಬ್‌ ನಾಡಿನ ಪುಟ್ಟ ರಾಷ್ಟ್ರ ಕತಾರ್‌ ಸಜ್ಜಾಗಿದೆ. ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಬರುವ ಫಿಫಾ ವಿಶ್ವಕಪ್‌ ಟೂರ್ನಿ, ಫುಟ್‌ಬಾಲ್‌ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ವಿವಿಧ ದೇಶಗಳ ಖ್ಯಾತ ತಾರೆಯರು ಕ್ಲಬ್‌ ಫುಟ್‌ಬಾಲ್‌ಗೆ ಅಲ್ಪ ವಿರಾಮವನ್ನಿತ್ತು ಕತಾರ್‌ನ ದೋಹಾಕ್ಕೆ ಬಂದಿದ್ದಾರೆ. ನ.20 ರಿಂದ ಡಿ.18ರ ವರೆಗೆ ನಡೆಯಲಿರುವ ಟೂರ್ನಿಯು ಫಿಫಾ ವಿಶ್ವಕಪ್‌ನ 22ನೇ ಟೂರ್ನಿ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು