ಜುನೊ, ಸಿ2 ತಂಡಗಳ ಜಯಭೇರಿ

ಮಂಗಳವಾರ, ಜೂಲೈ 16, 2019
25 °C

ಜುನೊ, ಸಿ2 ತಂಡಗಳ ಜಯಭೇರಿ

Published:
Updated:

ಬೆಂಗಳೂರು: ಶ್ರೀಧರನ್‌ ಹಾಗೂ ಈಶ್ವರ್‌ ಬಾರಿಸಿದ ಗೋಲುಗಳ ಬಲದಿಂದ ಜುನೊ ಎಫ್‌ಸಿ ತಂಡವು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸಿ ಡಿವಿಜನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಎನ್‌ ವಲಯದ ಪಂದ್ಯದಲ್ಲಿ ಬಿನ್ನಿ ಎಫ್‌ಸಿ ತಂಡವನ್ನು 2–0ಯಿಂದ ಮಣಿಸಿತು.‌

ಶ್ರೀಧರನ್‌ 40ನೇ ನಿಮಿಷದಲ್ಲಿ ಮತ್ತು ಈಶ್ವರ್‌ 41ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಮತ್ತೊಂದು ಪಂದ್ಯದಲ್ಲಿ ವಿವೇಕ್‌ ಅವರ ಅವಳಿ ಗೋಲುಗಳ ನೆರವಿನಿಂದ ಸಿ2ಎಫ್‌ಸಿ ತಂಡ ಬಾಗಲಕುಂಟೆ ಎಫ್‌ಸಿ ತಂಡವನ್ನು 6–0ಯಿಂದ ಮಣಿಸಿತು.

ಮೆಂಜಲ್ (21, 27ನೇ ನಿಮಿಷ), ವಿಶೇಷ್‌ (5ನೇ ನಿ), ಲೂಯಿಸ್‌ (18ನೇ ನಿ), ಸೈಫುಲ್ಲಾ (26ನೇ ನಿ) ಹಾಗೂ ಆಕಾಶ್‌ (60ನೇ ನಿ) ಗೋಲು ಬಾರಿಸಿ ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !