ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ನಲ್ಲಿ ಏನು ಬೇಕಾದರೂ ಆಗಬಹುದು: ಗುರುಪ್ರೀತ್

Last Updated 11 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ದೋಹಾ : ಫುಟ್‌ಬಾಲ್ ಪಂದ್ಯದಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಭಾರತ ಫುಟ್‌ಬಾಲ್ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಹೇಳಿದ್ದಾರೆ.

ಮಂಗಳವಾರ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಭಾರತ ತಂಡವು ಕತಾರ್ ಎದುರು ಗೋಲಿಲ್ಲದ ಡ್ರಾ ಸಾಧಿಸಿತ್ತು. ಪಂದ್ಯದ ನಂತರ ಅವರು ಮಾತನಾಡಿದರು.

‘ಏಷ್ಯನ್ ಚಾಂಪಿಯನ್ ತಂಡ ಕತಾರ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡವು ಅಮೋಘವಾಗಿ ಆಡಿತು. ಇದು ಎಲ್ಲರ ಆತ್ಮವಿಶ್ವಾಸ ಇಮ್ಮಡಿಸುವಂತೆ ಮಾಡಿದೆ. ಕತಾರ್ ತಂಡವನ್ನು ಅದರ ತವರಿನಲ್ಲಿಯೇ ನಿಯಂತ್ರಿಸಿದ್ದು ಸಣ್ಣ ಸಾಧನೆಯಲ್ಲ’ ಎಂದು ಗುರುಪ್ರೀತ್ ಹೇಳಿದರು.

‘ಟೂರ್ನಿಯಲ್ಲಿ ಈಗ ಎರಡು ಪಂದ್ಯಗಳನ್ನು ಆಡಿದ್ದೇವೆ. ಮೊದಲ ಪಂದ್ಯದಲ್ಲಿ ಓಮನ್ ವಿರುದ್ಧ ಸೋತಿದ್ದೆವು. ಇದೀಗ ಬಲಿಷ್ಠ ತಂಡದ ಎದುರು ಡ್ರಾ ಸಾಧಿಸಿದ್ದು ಉತ್ತಮ ಬೆಳವಣಿಗೆ. ಗುವಾಹಟಿಯಲ್ಲಿ ನಮಗೆ ಪ್ರೇಕ್ಷಕರ ಬೆಂಬಲ ಅಪಾರವಾಗಿ ಸಿಕ್ಕಿತ್ತು’ ಎಂದರು.

ಸ್ಟಿಮ್ಯಾಚ್ ಸಂತಸ: ‘ಕತಾರ್ ಎದುರು ನಾವು ಗೆಲ್ಲದಿರಬಹುದು.ಆದರೆ, ಸೋತಿಲ್ಲ. ಅವಂತಹ ಬಲಾಢ್ಯ ತಂಡದ ಎದುರು ಡ್ರಾ ಸಾಧಿಸಿದ ನಮ್ಮ ಆಟಗಾರರ ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ. ಅವರಿಗೆ ಗೋಲು ಗಳಿಸಲು ಬಹಳಷ್ಟು ಅವಕಾಶಗಳು ಲಭಿಸಿದ್ದವು. ಅವುಗಳನ್ನು ನಮ್ಮವರು ವಿಫಲಗೊಳಿಸಿದರು’ ಎಂದು ಭಾರತ ತಂಡದ ಕೋಚ್ ಇಗೋರ್ ಸ್ಟಿಮ್ಯಾಚ್ ಸಂತಸ ವ್ಯಕ್ತಪಡಿಸಿದರು.

‘ಓಮನ್ ವಿರುದ್ಧದ ಪಂದ್ಯದಲ್ಲಿ ಆಗಿದ್ದ ಕೆಲವು ಲೋಪಗಳನ್ನು ಗುರುತಿಸಿದ್ದೆವು. ಅವುಗಳನ್ನು ಸುಧಾರಿಸಿಕೊಂಡೆವು. ಆದರೆ ಸೋಲಿನ ಬಗ್ಗೆ ವಿಶ್ಲೇಷಿಸುತ್ತ ಕೂರುವುದು ಕೋಚ್ ಕೆಲಸ ಅಲ್ಲ. ಮುಂದಿನ ಗೆಲುವುಗಳ ಲೆಕ್ಕಾಚಾರ ಮಾಡುವುದು ಮುಖ್ಯ’ ಎಂದರು.

ನಾಯಕ ಮತ್ತು ಸ್ಟ್ಯೈಕರ್ ಸುನಿಲ್ ಚೆಟ್ರಿ ಅವರ ಅನುಪಸ್ಥಿತಿಯಲ್ಲಿ ತಂಡವು ಈ ಪಂದ್ಯದಲ್ಲಿ ಆಡಿತ್ತು.

‘ನಮ್ಮ ತಂಡದ ಆಟಗಾರರ ಫಿಟ್‌ನೆಸ್‌ ಚೆನ್ನಾಗಿದೆ. ಅವರು ಯಾವುದೇ ತಂಡಕ್ಕೂ ಕಠಿಣ ಸವಾಲು ಒಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.

‘ಅಕ್ಟೋಬರ್ 15ರಂದು ಕೋಲ್ಕತ್ತದಲ್ಲಿ ಬಾಂಗ್ಲಾದೇಶ ತಂಡವನ್ನು ನಾವು ಎದುರಿಸಲಿದ್ದೇವೆ. ಭಾರತದ ಫುಟ್‌ಬಾಲ್‌ ಕ್ರೀಡೆಯ ಶಕ್ತಿಕೇಂದ್ರವಾಗಿರುವ ಕೋಲ್ಕತ್ತದಲ್ಲಿ ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ’ ಎಂದು ಸ್ಟಿಮ್ಯಾಚ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT