ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌: ರೆಬೆಲ್ಸ್‌ಗೆ ಗೆಲುವು

Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿನ್ ಬಾಬು ಅವರ ಆಟದ ನೆರವಿನಿಂದ ರೆಬೆಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಬಿಬಿನ್‌ (11, 23ನೇ) ಎರಡು ಗೋಲು ಗಳಿಸಿ ಮಿಂಚಿದರು. ಚಿಕ್ಕಮಗಳೂರು ತಂಡದ ಇಲೆನ್ಸ್ ಶರ್ಮಾ (52ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಮತ್ತೊಂದು ಪಂದ್ಯದಲ್ಲಿ ಎಂಇಜಿ ಅಂಡ್ ಸೆಂಟರ್‌ ಎಫ್‌ಸಿ ತಂಡವು 2–0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು. ನಿಯಾಸ್ ನಾಜರ್ (80ನೇ), ಶೇಕ್ ಮುಜೀಬ್ (85ನೇ) ತಲಾ ಒಂದು ಗೋಲು ಗಳಿಸಿದರು.

ಇಂದಿನ ಪಂದ್ಯಗಳು

ಯಂಗ್‌ ಚಾಲೆಂಜರ್ಸ್ಸ್‌ ಎಫ್‌ಸಿ– ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ (ಮಧ್ಯಾಹ್ನ 1.30)

ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು– ಎಫ್‌ಸಿ ಡೆಕ್ಕನ್‌ (ಮಧ್ಯಾಹ್ನ 3.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT