ಶನಿವಾರ, ನವೆಂಬರ್ 23, 2019
22 °C

ಫುಟ್‌ಬಾಲ್‌: ಭಾರತದ ವನಿತೆಯರಿಗೆ ನಿರಾಸೆ

Published:
Updated:

ನವದೆಹಲಿ: ಭಾರತದ ಮಹಿಳಾ ತಂಡದವರು ವಿಯೆಟ್ನಾಂ ಎದುರಿನ ಫಿಫಾ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.

ಹನೋಯ್‌ನಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಆತಿಥೇಯ ತಂಡವು 3–0 ಗೋಲುಗಳಿಂದ ಗೆದ್ದಿತು.

ತವರಿನ ಅಭಿಮಾನಿಗಳ ಎದುರು ಆಡಿದ ವಿಯೆಟ್ನಾಂ ತಂಡವು ಎಂಟನೇ ನಿಮಿಷದಲ್ಲಿ ಖಾತೆ ತೆರೆಯಿತು. ತೀ ನುಹುಂಗ್‌ ಕಾಲ್ಚಳಕ ತೋರಿದರು.

ನಂತರ ಭಾರತ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿತು. 82ನೇ ನಿಮಿಷದಲ್ಲಿ ಆತಿಥೇಯರು ಮುನ್ನಡೆ ಹೆಚ್ಚಿಸಿಕೊಂಡರು. ತೀ ವಾನ್‌ ಚೆಂಡನ್ನು ಗುರಿ ಸೇರಿಸಿದರು. ಇದರ ಬೆನ್ನಲ್ಲೇ (89ನೇ ನಿಮಿಷ) ತೀ ಥುಯ್‌ ಹಾಂಗ್‌ ಅವರು ಗೋಲು ಗಳಿಸಿ ವಿಯೆಟ್ನಾಂ ತಂಡದ ಸಂಭ್ರಮಕ್ಕೆ ಕಾರಣರಾದರು.

ಬುಧವಾರ ನಡೆಯುವ ಎರಡನೇ ಹಣಾಹಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಪ್ರತಿಕ್ರಿಯಿಸಿ (+)