ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟರ್ಕಿಷ್ ಕಪ್ ಮಹಿಳಾ ಫುಟ್‌ಬಾಲ್; ಭಾರತಕ್ಕೆ ಮಣಿದ ಎಸ್ಟೋನಿಯಾ

Published 21 ಫೆಬ್ರುವರಿ 2024, 15:48 IST
Last Updated 21 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಅಲನ್ಯಾ (ಟರ್ಕಿ): ಭಾರತ ಫುಟ್‌ಬಾಲ್ ತಂಡ, ಟರ್ಕಿಷ್‌ ಮಹಿಳಾ ಕಪ್ ಟೂರ್ನಿಯಲ್ಲಿ ಬುಧವಾರ ತೀವ್ರ ಹೋರಾಟದ ನಂತರ ಎಸ್ಟೋನಿಯಾ ತಂಡವನ್ನು 4–3 ಗೋಲುಗಳಿಂದ ಸೋಲಿಸಿತು. ಇದು ಭಾರತ ತಂಡ, ಯುರೋಪಿಯನ್ ತಂಡವೊಂದರ ವಿರುದ್ಧ ಗಳಿಸಿದ ಮೊದಲ ಜಯ.

ಚಾವೊಬಾ ದೇವಿ ಅವರಿಂದ ತರಬೇತಾಗಿರುವ ಭಾರತ ತಂಡದ ಪರ ಮನಿಷಾ ಕಲ್ಯಾಣ್ ಎರಡು ಗೋಲುಗಳನ್ನು ಗಳಿಸಿದರು. ವಿರಾಮದ ವೇಳೆ ಸ್ಕೋರ್ 1–1 ರಲ್ಲಿ ಸಮನಾಗಿತ್ತು.

ಮನೋಹರ ತಾಣವಾದ ಗೋಲ್ಡ್‌ ಸಿಟಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮನಿಷಾ 17 ಮತ್ತು 81ನೇ ನಿಮಿಷ ಗೋಲುಗಳನ್ನು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದುಮತಿ ಕದಿರೇಷನ್ (62ನೇ ನಿಮಿಷ) ಮತ್ತು ಪ್ಯಾರಿ ಕ್ಸಾಕ್ಸಾ (79ನೇ ನಿಮಿಷ) ಅವರಿಂದ ಉಳಿದೆರಡು ಗೋಲುಗಳು ಬಂದವು.

ಲಿಸೆಟ್ಟೆ ತಮ್ಮಿಕ್ (32ನೇ), ವ್ಲಾದಾ ಕುಬಸೋವಾ (88ನೇ) ಮತ್ತು ಮಾರಿ ಲಿಸ್‌ ಲಿಲಿಮೆ (90ನೇ ನಿಮಿಷ) ಅವರು ಎಸ್ಟೊನಿಯಾ ಪರ ಗೋಲು ಗಳಿಸಿದರು.

ಒಂದು ಹಂತದಲ್ಲಿ ಭಾರತ 4–1ರಲ್ಲಿ ಮುಂದಿದ್ದು ಸುಲಭವಾಗಿ ಗೆಲ್ಲುವಂತೆ ಕಂಡಿತ್ತು. ಆದರೆ ಕೊನೆಯ ಎರಡು ನಿಮಿಷಗಳ ಅಂತರದಲ್ಲಿ ಎಸ್ಟೋನಿಯಾ ತಂಡ ಎರಡು ಗೋಲುಗಳನ್ನು ಗಳಿಸಿ ಹೋರಾಟ ಪ್ರದರ್ಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT