ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಫುಟ್‌ಬಾಲ್‌: ಮಿಸಾಕಾ ಯುನೈಟೆಡ್‌ಗೆ ಜಯ

Published : 22 ಜೂನ್ 2025, 19:52 IST
Last Updated : 22 ಜೂನ್ 2025, 19:52 IST
ಫಾಲೋ ಮಾಡಿ
0
ಫುಟ್‌ಬಾಲ್‌: ಮಿಸಾಕಾ ಯುನೈಟೆಡ್‌ಗೆ ಜಯ

ಬೆಂಗಳೂರು: ಸಾಂಘಿಕ ಆಟವಾಡಿದ ಮಿಸಾಕಾ ಯುನೈಟೆಡ್‌ ಎಫ್‌ಸಿ ತಂಡವು, ಬಿಡಿಎಫ್‌ಎ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ 4–0 ಅಂತರದಿಂದ ಅಂಬೇಡ್ಕರ್‌ ಎಫ್‌ಸಿ ತಂಡವನ್ನು ಮಣಿಸಿತು.

ADVERTISEMENT
ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ, ಮಿಸಾಕಾ ಯುನೈಟೆಡ್‌ ಎಫ್‌ಸಿ ತಂಡದ ಮೊಹಮ್ಮದ್‌ ಹಫ್ಸಲ್‌ ಎಂ. (14ನೇ ನಿ.), ಹಾರಿಮನ್‌ ಎ.ಕೆ. (28ನೇ ನಿ.), ಜೈಶಾದ್‌ ಪಿ. (35ನೇ ನಿ.) ಹಾಗೂ ಮುಷರಫ್‌ ಎ.ಪಿ. (50ನೇ ನಿ.) ತಲಾ ಒಂದು ಗೋಲು ಗಳಿಸಿದರು. ಕಳಪೆ ಪ್ರದರ್ಶನ ತೋರಿದ ಅಂಬೇಡ್ಕರ್‌ ಎಫ್‌ಸಿ ತಂಡದ ಆಟಗಾರರು ಗೋಲು ಗಳಿಸಲು ವಿಫಲರಾದರು.

ಮತ್ತೊಂದು ಪಂದ್ಯದಲ್ಲಿ, ಹಿಂದೂ ಸೋಷಿಯಲ್ಸ್‌ ಎಫ್‌ಸಿ ತಂಡವು 6–0ರಿಂದ ಬಿಎಚ್‌ಇಎಲ್‌ (ಇಡಿಎನ್‌) ಎದುರು ಗೆಲುವು ಸಾಧಿಸಿತು. ಹಿಂದೂ ಸೋಷಿಯಲ್ಸ್‌ ತಂಡದ ಎಸ್‌.ಎಂ. ಕೌರವ್‌ ರಿತ್ವಿಕ್‌ (4ನೇ, 11ನೇ ಹಾಗೂ 49ನೇ ನಿ.) ಮೂರು ಗೋಲು ಗಳಿಸಿ ಮಿಂಚಿ
ದರು. ಪ್ರಿಯಾನ್‌ ವಿ. (5ನೇ ನಿ.), ಸೋಲಮಲೈ (47ನೇ ನಿ.) ಹಾಗೂ ಮ್ಯಾಸ್ಟ್ರೋ ಎಸ್‌. ಥಾಮಸ್ (50ನೇ
ನಿ.) ತಲಾ ಒಂದು ಗೋಲು ಹೊಡೆದರು.

ಸೋಮವಾರ ನಾಕ್‌ಔಟ್‌ ಪಂದ್ಯಗಳು ನಡೆಯಲಿದ್ದು, ಹಂಪಿ
ನಗರ ಎಫ್‌ಸಿ– ಯೂನಿವರ್ಸಲ್‌ ಎಫ್‌ಸಿ, ಬೆಂಗಳೂರು ವಾಂಡರರ್ಸ್‌– ಜೈ ಭಾರತ್‌ ನಗರ ಎಫ್‌ಸಿ, ಈಸ್ಟ್‌ವೆಸ್ಟ್‌ ಎಫ್‌ಸಿ– ಎಂಪೈರ್‌ ಎಫ್‌ಸಿ ಹಾಗೂ ಯಂಗ್‌ಬಾಯ್ಸ್‌ ಎಫ್‌ಸಿ– ಬೆಂಗಳೂರು ಬಾಯ್ಸ್‌ ಎಫ್‌ಸಿ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0