ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈಯಿನ್‌ಗೆ ಕೋಯ್ಲೆ ಕೋಚ್

Last Updated 4 ಡಿಸೆಂಬರ್ 2019, 15:42 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ತಂಡ ಸತತ ಸೋಲಿನಿಂದ ಬೇಸರಗೊಂಡು ರಾಜೀನಾಮೆ ನೀಡಿದ ಕೋಚ್ ಜಾನ್ ಗ್ರೆಗರಿ ಬದಲಿಗೆ ಓವೆನ್ ಕೋಯ್ಲೆ ಅವರನ್ನು ಚೆನ್ನೈಯಿನ್ ಎಫ್‌ಸಿ ತಂಡ ನೇಮಕ ಮಾಡಿದೆ.

ಬರ್ನ್‌ಲಿ ಮತ್ತು ಬಾಲ್ಟನ್ ವಾಂಡರರ್ಸ್‌ ತಂಡಗಳ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಕೋಯ್ಲೆ ಇಂಗ್ಲೆಂಡ್‌ನವರು. ಐಎಸ್‌ಎಲ್‌ ಆರನೇ ಆವೃತ್ತಿ ಮುಗಿಯುವ ವರೆಗೂ ಅವರು ಕೋಚ್ ಆಗಿ ಮುಂದುವರಿಯುವರು ಎಂದು ಚೆನ್ನೈಯಿನ್ ಎಫ್‌ಸಿ ತಿಳಿಸಿದೆ.

ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್ ತಂಡ ನಾಲ್ಕನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದ ಜಾನ್‌ ಗ್ರೆಗರಿ ನವೆಂಬರ್ 30ರಂದು ರಾಜೀನಾಮೆ ನೀಡಿದ್ದರು. ಕಳೆದ ಬಾರಿ, ಐದನೇ ಆವೃತ್ತಿಯಲ್ಲಿ ನೀರಸ ಆಟ ಆಡಿದ್ದ ತಂಡ ಈ ಬಾರಿ ಆಡಿದ ಮೊದಲ ಆರು ಪಂದ್ಯಗಳಲ್ಲಿ ಮೂರನ್ನು ಸೋತು ಎರಡನ್ನು ಡ್ರಾ ಮಾಡಿಕೊಂಡಿತ್ತು.

‘ಚೆನ್ನೈಯಿನ್ ಎಫ್‌ಸಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲು ಸಂತಸವಾಗುತ್ತಿದೆ. ಇದು ಅತ್ಯುತ್ತಮ ಆಟಗಾರರನ್ನು ಹೊಂದಿರುವ ತಂಡವಾಗಿದ್ದು ಎಲ್ಲರೂ ಗೆಲುವಿನ ತವಕದಲ್ಲಿದ್ದಾರೆ. ಆದಷ್ಟು ಬೇಗ ತಂಡವನ್ನು ಸೇರಿಕೊಳ್ಳಲು ಮನಸ್ಸು ತುಡಿಯುತ್ತಿದೆ’ ಎಂದು ಕೋಯ್ಲೆ ಹೇಳಿದ್ದಾರೆ. ನವೆಂಬರ್ 9ರಂದು ಜೆಮ್‌ಶೆಡ್‌ಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಯ್ಲೆ ಮೊದಲ ಬಾರಿ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT