ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ತರುಣ ಮಂಡಳಕ್ಕೆ ಟ್ರೋಫಿ

ಚಿಂಚಲಿ ಮಹಾಕಾಳಿ ಚಾಂಪಿಯನ್ಸ್‌ ಟ್ರೋಫಿ ಫುಟ್‌ಬಾಲ್‌
Last Updated 11 ಜನವರಿ 2021, 16:24 IST
ಅಕ್ಷರ ಗಾತ್ರ

ಹಂದಿಗುಂದ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ತರುಣ ಮಂಡಳ ತಂಡದವರು ರಾಯಬಾಗ ತಾಲ್ಲೂಕಿನ ಚಿಂಚಲಿಯಲ್ಲಿ ಸೋಮವಾರ ಮುಕ್ತಾಯವಾದ ಮಹಾಕಾಳಿ ಚಾಂಪಿಯನ್ಸ್‌ ಟ್ರೋಫಿ–2021 ರಾಷ್ಟ್ರಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಮಹಾಕಾಳಿ ಶಿಕ್ಷಣ ಸಂಸ್ಥೆ ಮತ್ತು ಮಹಾಕಾಳಿ ಫುಟ್‌ಬಾಲ್‌ ಅಕಾಡೆಮಿ ಸಹಯೋಗದಲ್ಲಿ ಬಿ.ಆರ್. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊಲ್ಹಾಪುರದ ಬಾಲಗೋಪಾಲ ಫುಟ್‌ಬಾಲ್‌ ತಂಡದ ವಿರುದ್ಧ ಶಿವಾಜಿ ತರುಣ ಮಂಡಳಿ ಗೆಲುವು ಸಾಧಿಸಿತು.

ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿ, ತಲಾ 1 ಗೋಲು ಗಳಿಸಿದ್ದವು. ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಶಿವಾಜಿ ತರುಣ ಮಂಡಲದವರು 5 ಗೋಲುಗಳನ್ನು ಗಳಿಸಿ ಟ್ರೋಫಿಗೆ ಮುತ್ತಿಟ್ಟರು.

ವಿಜೇತ ತಂಡಗಳಿಗೆ ವಿಧಾನಪರಿಷತ್ ಸದಸ್ಯರೂ ಆದ ಬೆಮುಲ್ ಅಧ್ಯಕ್ಷ ವಿವೇಕರಾವ ಪಾಟೀಲ ₹ 50ಸಾವಿರ ಬಹುಮಾನ ಹಾಗೂ ಟ್ರೋಫಿ ನೀಡಿದರು. ಮಾಡಿದರು. ದ್ವಿತೀಯ ಸ್ಥಾನ ಗಳಿಸಿದ ಬಾಲ ಗೋಪಾಲ ತಂಡಕ್ಕೆ ಮಹಾಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಆರ್. ಜಾಧವ ₹ 25ಸಾವಿರ ಬಹುಮಾನ ಹಾಗೂ ಟ್ರೋಫಿ ವಿತರಿಸಿದರು.

ಸಮಾರೋಪದಲ್ಲಿ ಮಾತನಾಡಿದ ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್. ಡಿಗ್ರಜ್, ‘ಗ್ರಾಮೀಣ ಭಾಗದಲ್ಲಿ ರಾಷ್ಟ್ರಮಟ್ಟದ ಫುಟ್‌ಬಾಲ್ ಪಂದ್ಯಾವಳಿ ನಡೆಸುವ ಮೂಲಕ ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಣಯ ಪಾಟೀಲ ಅವರು ಇಲ್ಲಿನ ಯುವಕರಿಗೆ ಸ್ಫೂರ್ತಿ ತುಂಬಿದ್ದಾರೆ. ಇದರೊಂದಿಗೆ ಚಿಂಚಲಿ ಪಟ್ಟಣವೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತಾಗಿದೆ’ ಎಂದರು.

ಇಬ್ರಾಹಿಂ, ದರ್ಶನ, ಶ್ಯಾಮಸುಂದರ, ಅನಿಲ ನಿರ್ಣಾಯಕರಾಗಿದ್ದರು.

ದೇಹದಾರ್ಢ್ಯ ಪಟುಗಳಾದ ಸುನೀಲ ಅಪ್ಟೇಕರ್, ಮಹದೇವ ಪಡೋಳಕರ, ಬೆಮುಲ್ ಉಪ ವ್ಯವಸ್ಥಾಪಕ ಎಸ್. ಜಯಾನಂದ, ಮುಖಂಡರಾದ ಡಾ.ಸಿ.ಬಿ. ಕುಲಗುಡ, ಅಣ್ಣಾಸಾಬ ದೇಸಾಯಿ, ಲಕ್ಷ್ಮೀಕಾಂತ ದೇಸಾಯಿ, ಸಾತಗೌಡ ಪಾಟೀಲ, ಭೂಪಾಲ ಪುಣೆಕರ, ಕುಮಾರ ಶ್ರೀಕಾತ ಹಾರೂಗೇರಿ, ರಾಜು ಬಣಗೆ, ನವೀನ ಪಟೇಕರಿ, ಅಜಿತ ದಂಡಾಪುರೆ, ಸುಜಿತ ಪೂಜೇರಿ, ಅಜಿತ ಪಾಟೀಲ, ತಮ್ಮಣ್ಣ ವಡ್ಡರ, ಅಕ್ಷಯ ಸೌದಲಗಿ, ಸಂಜು ಸೌದಲಗಿ, ತಮ್ಮಣ್ಣ ವಡ್ಡರ, ರಾಜು ಶಿಂಧೆ, ವಿಶ್ವನಾಥ ಪಾಟೀಲ, ರಮೇಶ ಪಾಟೀಲ, ಅಮಿತ ಚೌಗಲಾ, ಆದರ್ಶ ಪೂಜೇರಿ, ಅಕ್ಷಯ ಸೌದಲಗಿ, ಶ್ರೀಶೈಲ ಪಾಟೀಲ, ಕುಮಾರ ಹಾರೂಗೇರಿ, ಭೀಮು ಬಣಗೆ, ಅಂತು ಬಣಗೆ, ಮಹಾವೀರ ಕೋಳಿ, ಸಂಭಾ ಶಿಂಧೆ, ವಿಶ್ವನಾಥ ಜಲಾಲಪುರೆ, ಅಜಿತ ಘೋಗಡಿ, ದಿಗ್ವಿಜಯ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT