ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಗೋವಾ ಎಫ್‌ಸಿ ಶುಭಾರಂಭ

Last Updated 23 ಅಕ್ಟೋಬರ್ 2019, 16:28 IST
ಅಕ್ಷರ ಗಾತ್ರ

ಮಡಗಾಂವ್‌: ಆತಿಥೇಯ ಗೋವಾ ಎಫ್‌.ಸಿ. ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 3–0 ಗೋಲುಗಳಿಂದ ಮಾಜಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌.ಸಿ. ತಂಡವನ್ನು ಸೋಲಿಸಿ ಆರನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ ಕಳೆದ ವರ್ಷದ ರನ್ನರ್‌ ಅಪ್‌ ಗೋವಾ ತಂಡ 1–0 ಮುನ್ನಡೆ ಪಡೆದಿತ್ತು. ಮನ್‌ವೀರ್‌ ಸಿಂಗ್‌ ಪಾಸ್‌ನಲ್ಲಿ ಸೆಮಿನ್‌ಲಿನ್‌ ಡಂಜೆಲ್‌ 30ನೇ ನಿಮಿಷ ಗೋವಾ ತಂಡದ ಗೋಲು ಖಾತೆ ತೆರೆದರು. ವಿರಾಮದ ನಂತರ ಫೆರಾನ್‌ ಕೊರೊಮಿನಾಸ್‌ (62ನೇ ನಿಮಿಷ) ಮತ್ತು ಕಾರ್ಲೋಸ್‌ ಪೆನಾ (81ನೇ ನಿಮಿಷ) ಗೆಲುವಿನ ಅಂತರ ಹೆಚ್ಚಿಸಿದರು.

ಈ ಪಂದ್ಯಕ್ಕೆ ಮೊದಲು ಇವೆರಡು ತಂಡಗಳು 13 ಬಾರಿ ಎದುರಾಗಿದ್ದು ಎರಡೂ ತಂಡಗಳು ತಲಾ ಆರು ಬಾರಿ ಜಯಗಳಿಸಿದ್ದವು. ಒಂದು ಪಂದ್ಯ ಡ್ರಾ ಆಗಿತ್ತು.

ಇಂದಿನ ಪಂದ್ಯ: ಕೇರಳ ಬ್ಲಾಸ್ಟರ್ಸ್‌– ಮುಂಬೈ ಸಿಟಿ

ಸ್ಥಳ: ಜವಾಹರಲಾಲ್‌ ನೆಹರೂ ಕ್ರೀಡಾಂಗಣ, ಕೊಚ್ಚಿ

‌ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT