ಸೋಮವಾರ, ಜನವರಿ 24, 2022
20 °C

ಐಎಸ್‌ಎಲ್ : ಗೋವಾ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋವಾ: ಅಲ್ಬರ್ಟೊ ನೊಗೆರಾ ಹೊಡೆದ ಎರಡು ಗೋಲುಗಳ ಬಲದಿಂದ ಗೋವಾ ಫುಟ್‌ಬಾಲ್ ಕ್ಲಬ್ ತಂಡವು  ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಗೋವಾ ತಂಡವು 4–3ರಿಂದ ಈಸ್ಟ್‌ ಬೆಂಗಾಲ್ ವಿರುದ್ಧ ರೋಚಕ ಜಯ ಸಾಧಿಸಿತು.

ಗೋವಾ ತಂಡದ ಅಲ್ಬರ್ಟೊ 14ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಅದಕ್ಕೆ ತಿರುಗೇಟು ನೀಡಿದ ಬೆಂಗಾಲ್ ತಂಡದ ಅಂಟೋನಿಯೊ ಪೆರೊಸೊವಿಚ್ 26ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆಈ ಸಂತಸ ಹೆಚ್ಚು ಹೊತ್ತು  ಉಳಿಯಲಿಲ್ಲ. ಗೋವಾದ ಜಾರ್ಜ್ ಒರ್ಲಿಜ್ ಮೆಂಡೊನ್ಸಾ 32ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯಲ್ಲಿ ಗೋಲು ಬಾರಿಸಿದರು. ಬೆಂಗಾಲ್ ತಂಡದ ಅಮೀರ್ ಡರ್‌ಸೆವಿಚ್ 37ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲಕ್ಕೆ ಕಾರಣರಾದರು. ಆದರೆ, ಅವರ ತಂಡದ ಅಂಟೋನಿಯೊ 44ನೇ ನಿಮಿಷದಲ್ಲಿ ಗೋವಾಕ್ಕೆ ಉಡುಗೊರೆ  ಗೋಲು ನೀಡಿದರು. 

ತಮ್ಮ ತಪ್ಪನ್ನು ಸುಧಾರಿಸಿಕೊಂಡ ಆಂಟೊನಿಯೊ 59ನೇ ನಿಮಿಷದಲ್ಲಿ ತಮ್ಮ ತಂಡದ ಪರ ಗೋಲು ಹೊಡೆದರು. ಇದರಿಂದಾಗಿ 3–3ರಿಂದ ಸಮಬಲವಾಗಿತ್ತು. ಆದರೆ, 79ನೇ ನಿಮಿಷದಲ್ಲಿ ಅಲ್ಬರ್ಟೊ ತೋರಿದ ಕಾಲ್ಚಳಕದಿಂದಾಗಿ ಗೋವಾ ಗೆಲುವಿನ ಕೇಕೆ ಹಾಕಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು